ಮೊಕ್ಷ: ೩:೪೯
ಆದ್ಯಂತ ಗ್ರಹಣ ಕಾಲ: ೩ ತಾಸು ೫೫ ನಿಮಿಷ.
ಉತ್ರರಾಷಾಢ ಮತ್ತು ಶ್ರವಣ ನಕ್ಷತ್ರದಲ್ಲಿ ಮಕರ ರಾಶಿಯಲ್ಲಿ ಚಂದ್ರನಿಗೆ ಕೇತುಗ್ರಸ್ತ ಚಂದ್ರಗ್ರಹಣ.
ಅಲ್ಲದೇ ಕುಂಭ, ಮಿಥುನ, ಸಿಂಹಬರಾಶಿಗೆ ಅಶುಭ ಫಲ. ಆರೋಗ್ಯವಂತರು ಮಧ್ಯಾಹ್ನ ೩:೨೫ ರ ವರೆಗೆ ಭೋಜನಾದಿಗಳನ್ನು ಮಾಡಬಹುದು, ಅಶಕ್ತರು ,ರೊಗಿಗಳು, ಮಕ್ಕಳು, ವೃಧ್ಧಾದಿಗಳು, ಸಂಜೆ : ೭ ಘಂಟೆಯವರೆಗೆ ಭೋಜನ ಸ್ವಿಕರಿಸಬಹುದು.
ಕೇತುಗ್ರಸ್ತವಾದ ಕಾರಣ ಗಣಪತಿಯ ಆರಾಧನೆಯನ್ನು ಮಾಡಿರಿ. ಆದ್ಯಂತ ಗ್ರಹಣ ಕಾಲದಲ್ಲಿ ಜಪ ತಪಾದಿಗಳನ್ನು ಕೈಗೊಳ್ಳಿ, ಮಹಾಗ್ರಹಣ ಎಂದು ನೈಸರ್ಗಿಕವಾಗಿ ನಡೆಯುವ ಪ್ರಾಕೃತಿಕ ಕಾರ್ಯಕ್ಕೆ ಹೆದರಿ, ಅಂಜಿ, ಮೋಸಹೋಗುವ ಪ್ರಮೇಯವೇ ಇಲ್ಲ. ಪೃಕೃತಿಯನ್ನು ಗೌರವಿಸಿ, ಗ್ರಹಣದ ದಿನ ಜಾಸ್ತಿ ಹೊರ ಹೊಗುವ ಅವಶ್ಯಕತೆ ಇಲ್ಲ.ದೇವತಾ ಸ್ಮರಣೆಯಲ್ಲಿ ಕಾಲ ಕಳೆಯಿರಿ. ಗ್ರಹಣ ಮೋಕ್ಷಾನಂತರ ಸ್ನಾನಮಾಡಿ, ಇಷ್ಟದೇವತಾ ಆರಾಧನೆಯನ್ನು ಮಾಡಿರಿ.