ಒಬ್ಬ ಮಗನಿರುವ ತಾಯಿ ಈ ದಿನ ತಲೆಸ್ನಾನ ಮಾಡಿದರೆ ಮಗನಿಗೆ ಅಪಾಯವಂತೆ

ಗುರುವಾರ, 26 ಜುಲೈ 2018 (06:34 IST)
ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವು ಆಚಾರ ವಿಚಾರಗಳಿವೆ. ಅವುಗಳಲ್ಲಿ ಒಂದೊಂದಕ್ಕೂ ಒಂದೊಂದು ಅರ್ಥವಿರುತ್ತದೆ. ಅದರಲ್ಲೂ ಮಹಿಳೆಯರ ಬಗ್ಗೆ ಆಚಾರಗಳು ಹೆಚ್ಚು. ಆದಕಾರಣ ಮಹಿಳೆಯರು ಯಾವ ದಿನಗಳಲ್ಲಿ ತಲೆಸ್ನಾನ ಮಾಡಬೇಕು, ಮಾಡಬಾರದು ಎಂಬುದನ್ನು ಕೂಡ  ನಮ್ಮ ಸಂಪ್ರದಾಯದಲ್ಲಿ ತಿಳಿಸಲಾಗಿದೆ.


ಮಹಿಳೆಯರ ಜಡೆಯ ಮೂರು ಭಾಗಗಳಲ್ಲಿ ಗಂಗಾ, ಯಮುನಾ, ಸರಸ್ವತಿ ಇರುತ್ತಾರಂತೆ. ಮಧ್ಯೆ ಭಾಗದ ಬೈತಲೆಯಲ್ಲಿ ಲಕ್ಷ್ಮೀ ದೇವಿಯ ಸನ್ನಿಧಾನವಿರುತ್ತದೆಯಂತೆ. ಆದ್ದರಿಂದ ಮಹಿಳೆಯರು ಪ್ರತಿದಿನ ತಲೆಯ ಸ್ನಾನ ಮಾಡಬಾರದು ಎಂದು ಪುರಾಣಗಳು ಹೇಳುತ್ತಿವೆ.


ಪುರಾಣಗಳ ಪ್ರಕಾರ ಮಹಿಳೆಯರು ಮಂಗಳವಾರ ತಲೆಸ್ನಾನ ಮಾಡಬಾರದಂತೆ. ಒಂದುವೇಳೆ ಮಾಡಿದರೆ ಮಂಗಳ ಗ್ರಹದ ಕೋಪಕ್ಕೆ ಒಳಗಾಗುತ್ತಾರಂತೆ. ಹಾಗೇ ಬುಧವಾರ ಒಬ್ಬ ಮಗನಿರುವ ತಾಯಂದಿರು ತಲೆಸ್ನಾನ ಮಾಡಬಾರದಂತೆ. ಒಂದುವೇಳೆ ಮಾಡಿದರೆ ಮಗನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ. ಆದರೆ ಸಂತಾನ ಪಡೆಯಲು ಹೊಸದಾಗಿ ಮದುವೆಯಾದ ಮಹಿಳೆಯರು ಅಂದು ತಲೆಸ್ನಾನ ಮಾಡಬಹುದಂತೆ.


ಗುರುವಾರ ತಲೆ ಸ್ನಾನ ಮಾಡಿದರೆ ಲಕ್ಷ್ಮೀದೇವಿ ಕೋಪಗೊಳ್ಳತ್ತಾಳಂತೆ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆಯಂತೆ. ಹಾಗೇ ಶನಿವಾರ ಮಾಡಿದರೆ ಶನಿದೇವ ಕೋಪಗೊಳ್ಳುತ್ತಾನಂತೆ. ಆದ್ದರಿಂದ ಭಾನುವಾರ, ಸೋಮವಾರ ಹಾಗೂ ಶುಕ್ರವಾರ ಮಹಿಳೆಯರು ತಲೆ ಸ್ನಾನ ಮಾಡಿದರೆ ಯಾವ ಸಮಸ್ಯೆ ಇಲ್ಲವಂತೆ. ಹಾಗೇ ಮುಟ್ಟಾದಾಗ ಹಾಗೂ ಸೂತಕದ ಸಂದರ್ಭದಲ್ಲಿ ಮಹಿಳೆಯರು ತಲೆಸ್ನಾನ ಮಾಡಿದರೆ ಯಾವ ದೋಷ ಇರುವುದಿಲ್ಲ ಎಂದು ಪುರಾಣದಲ್ಲಿ ತಿಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ