ಪೊರಕೆ ಖರೀದಿ ಮಾಡುವಾಗಲೂ ವಾಸ್ತು ಪ್ರಕಾರ ಈ ಟಿಪ್ಸ್ ಫಾಲೋ ಮಾಡಿ

Krishnaveni K

ಶುಕ್ರವಾರ, 14 ಜೂನ್ 2024 (10:30 IST)
ಬೆಂಗಳೂರು: ಪೊರಕೆ ಎನ್ನುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುತ್ತದೆ. ಆದರೆ ಯಾವಾಗ ಪೊರಕೆ ಖರೀದಿ ಮಾಡಬೇಕು, ಎಲ್ಲಿ ಇಡಬೇಕು ಎಂಬಿತ್ಯಾದಿ ವಿಚಾರಗಳನ್ನು ನೀವು ವಾಸ್ತು ಪ್ರಕಾರ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

ಪೊರಕೆ ಎನ್ನುವುದು ಎಲ್ಲರಿಗೂ ಒಂದು ನಿಕೃಷ್ಟ ವಸ್ತು ಎಂಬ ಭಾವನೆಯಿರುತ್ತದೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಪೊರಕೆ ವಾಸ್ತವವಾಗಿ ನಮ್ಮ ಮನೆಯಲ್ಲಿರುವ ಕಸವನ್ನು ಹೊರ ಹಾಕಿ ಮನೆಯನ್ನು ಶುದ್ಧ ಮಾಡಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲು ಸಹಾಯ ಮಾಡುವ ಸಾಧನವಾಗಿದೆ.

ಹೀಗಾಗಿ ಪೊರಕೆಯನ್ನು ಒಂದು ಪ್ರಶಸ್ತ ದಿನದಲ್ಲಿ ಖರೀದಿ ಮಾಡುವುದು ಮುಖ್ಯವಾಗಿದೆ. ಪೊರಕೆ ಅದೃಷ್ಟದ ಸಂಕೇತವಾಗಿದ್ದು ಇದನ್ನು ಖರೀದಿ ಮಾಡುವುದಕ್ಕೆ ಇಂತಹ ದಿನವೇ ಎಂಬುದಿಲ್ಲ. ಆದರೆ ಸಂಜೆ ಮೇಲೆ ಪೊರಕೆ ಖರೀದಿ ಮಾಡುವುದು ಅಷ್ಟು ಶುಭಕರವಲ್ಲ ಎನ್ನಲಾಗುತ್ತದೆ.

ಹೊಸದಾಗಿ ತಂದ ಪೊರಕೆಯನ್ನು ಶನಿವಾರದಿಂದ ಬಳಸಲು ಪ್ರಾರಂಭಿಸಿ. ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಿ. ಆದರೆ ಅಪ್ಪಿತಪ್ಪಿಯೂ ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ಸಂಪತ್ತು ಹಾನಿಯಾಗಬಹುದು. ಪೊರಕೆಯನ್ನು ಯಾವಾಗಲೂ ವಿಶ್ರಾಂತಿ ಕೊಠಡಿಯ ಮೂಲೆಯಲ್ಲಿ ಯಾರಿಗೂ ಕಾಣದಂತೆ ಕೆಳಗೆ ಚಾಚಿದ ರೀತಿಯಲ್ಲಿಡಿ. ಇದರಿಂದ ಮನೆಗೂ ಒಳಿತಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ