ಬೆಂಗಳೂರು : ಜೀವನದಲ್ಲಿ ಮನುಷ್ಯ ಪಾಪ ಪುಣ್ಯಗಳನ್ನು ಮಾಡುತ್ತಿರುತ್ತಾನೆ. ಅವನು ಮಾಡಿದ ಪುಣ್ಯದಿಂದ ಅವನಿಗೆ ಸುಖ ಸಿಕ್ಕಿದರೆ ಆತ ಮಾಡಿದ ಪಾಪಕ್ಕೆ ಕಷ್ಟಗಳು ಎದುರಾಗುತ್ತವೆ. ಆದಕಾರಣ ನಿಮ್ಮ ಪಾಪಗಳು ವಿಮೋಚನೆಯಾಗಲು ಬ್ರಹ್ಮ ಸೃಷ್ಟಿ ಮಾಡಿದ ಈ ದೇವಾಲಯಕ್ಕೆ ಭೇಟಿ.
ಈ ದೇವಾಲಯದ ಹೆಸರು ಬ್ರಹ್ಮಪುರೀಶ್ವರ ದೇವಾಲಯ. ಇದು ತಮಿಳುನಾಡಿನ ತಿರುಚಿ ಸಮೀಪದಲ್ಲಿರುವ ತಿರುಪತ್ತೂರ್ ನಲ್ಲಿ ಇದೆ. ಬ್ರಹ್ಮನಿಗೆ ತನ್ನ ಬಗ್ಗೆ ಅಹಂ ಹೆಚ್ಚಾಗಿ ಶಿವನನ್ನು ಹೀಯಾಳಿಸಿದಾಗ ಕೋಪಗೊಂಡ ಶಿನ ಬ್ರಹ್ಮನ ತಲೆಯನ್ನು ಕತ್ತರಿಸುತ್ತಾನೆ. ಆಗ ಬ್ರಹ್ಮ ಸಾಯುತ್ತಾನೆ. ಬಳಿಕ ಬೇಸರಗೊಂಡ ಶಿವ ಮತ್ತೆ ಬ್ರಹ್ಮನಿಗೆ ಜೀವದಾನ ಮಾಡುತ್ತಾನೆ.
ಬಳಿಕ ಬ್ರಹ್ಮದೇವನಿಗೆ ತನ್ನ ತಪ್ಪಿನ ಅರಿವಾಗಿ ಪರಿತಪಿಸುತ್ತಾನೆ. ತನ್ನ ಪಾಪವನ್ನು ಕಳೆದುಕೊಳ್ಳಲು ಬ್ರಹ್ಮ ಇಲ್ಲಿ 12 ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಆದಕಾರಣ ಇಲ್ಲಿಗೆ ಬಂದ ಭಕ್ತರು ಈ 12 ಶಿವಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಅವರ ಪಾಪಕರ್ಮಗಳು ವಿಮೋಚನೆಯಾಗುತ್ತದೆ ಎಂದು ನಂಬಲಾಗಿದೆ.