ಯಾವ ದೇವರಿಗೆ ಯಾವ ಬಣ್ಣ ಇಷ್ಟ ಎಂಬುದು ತಿಳಿಬೇಕಾ?

ಮಂಗಳವಾರ, 30 ಏಪ್ರಿಲ್ 2019 (08:55 IST)
ಬೆಂಗಳೂರು : ಸಾಮಾನ್ಯ ಜನರಿಗೆ ಬಣ್ಣ, ಬಣ್ಣದ ಬಟ್ಟೆಗಳನ್ನು, ವಸ್ತ್ರ, ಆಭರಣಗಳನ್ನು ಧರಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಅದೇರೀತಿ ದೇವರಿಗೂ ಕೂಡ ಬಣ್ಣಗಳ ಮೇಲೆ ಒಲವು ಇದೆಯಂತೆ.




ಹೌದು. ಗಣಪತಿ ಮತ್ತು ದೇವಿಯರಿಗೆ ಕೆಂಪು ಬಣ್ಣವೆಂದರೆ ಬಹಳ ಪ್ರೀತಿಯಂತೆ. ಆದ್ದರಿಂದ ಅವರನ್ನು ಕೆಂಪು ಹೂ ಮತ್ತು ಕೆಂಪು ವಸ್ತ್ರದಿಂದ ಪೂಜಿಸಲಾಗುತ್ತದೆ.


ಸರಸ್ವತಿ ದೇವಿಗೆ ಬಿಳಿ ಬಣ್ಣವೆಂದರೆ ಇಷ್ಟವಂತೆ. ಆದ್ದರಿಂದ ಆಕೆ  ಬಿಳಿ ಸೀರೆಯನ್ನು ಉಟ್ಟು, ಬಿಳಿ ಸ್ಪಟಿಕದ ಸರವನ್ನು ಕೈಯಲ್ಲಿ ಹಿಡಿದು, ಬಿಳಿ ಕಮಲದ ಹೂವಿನ ಮೇಲೆ ಕುಳಿತಿರುತ್ತಾಳೆ. ಸರಸ್ವತಿಯನ್ನು ಬಿಳಿ ಹೂವಿನಿಂದ ಪೂಜಿಸಿದರೆ ಅತಿ ಶ್ರೇಷ್ಠ ಎನ್ನಲಾಗಿದೆ.


ಬನಶಂಕರಿ ದೇವಿಕಾಡಿನ ಮಧ್ಯದಲ್ಲಿ ವಾಸಿಸುವುದರಿಂದ ಆಕೆಗೆ ಹಸಿರು ಬಣ್ಣವೆಂದರೆ ಬಹಳ ಇಷ್ಟವಂತೆ. ಆದ್ದರಿಂದ  ಹೆಚ್ಚಿನ ಭಕ್ತರು ಈ ದೇವಿಗೆ ಹಸಿರು ಬಣ್ಣದ ಸೀರೆಯನ್ನು ಹರಕೆಯಾಗಿ ಕೊಡುತ್ತಾರೆ.


ಮಹಾ ವಿಷ್ಣು ಹಳದಿ ಬಟ್ಟೆಯನ್ನು ಧರಿಸಿದ್ದುದರಿಂದ ಅವನನ್ನು ಪೀತಾಂಬರ ಧಾರಿ ಎಂದು ಕರೆಯುತ್ತಾರೆ. ಸುಬ್ರಹ್ಮಣ್ಯನಿಗೆ ಹಳದಿ ಬಣ್ಣವೆಂದರೆ ಬಲು ಪ್ರೀತಿ. ಆ ಕಾರಣಕ್ಕಾಗಿಯೇ ಹಳದಿ ಅಕ್ಷತೆ, ಹಳದಿ ಬಟ್ಟೆಯಿಂದ ಪೂಜಿಸುವರು.


ದೇವಿಗಳ ಪೈಕಿ ಮಹಾಕಾಳಿ ಕಪ್ಪು ವರ್ಣದವಳು. ಮಹಾಕಾಳಿಗೆ ಕಪ್ಪು ಬಣ್ಣವೆಂದರೆ ಬಲು ಪ್ರೀತಿ. ಅಯ್ಯಪ್ಪ ಸ್ವಾಮಿಗೆ ಕಪ್ಪು ಬಣ್ಣವೆಂದರೆ ಪ್ರೀತಿ. ಈ ಕಾರಣಕ್ಕಾಗಿ ಅಯ್ಯಪ್ಪ ದೇವಾಲಯಕ್ಕೆ ಕಪ್ಪು ಬಟ್ಟೆಯನ್ನು ಧರಿಸಿ ಹೋಗುವರು . ಶನಿ ಗ್ರಹಕ್ಕೆ ಕಪ್ಪು ಬಣ್ಣ ಬಲು ಪ್ರೀತಿ. ಆದ್ದರಿಂದ ಶನಿ ದೋಷ ಇದ್ದಾಗ ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ದೀಪ ಮಾಡಿ ಹಚ್ಚಬೇಕು. ಕಪ್ಪು ಎಳ್ಳನ್ನು ದಾನ ಮಾಡಬೇಕು ಎನ್ನುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ