ಬಟ್ಟೆಗೆ ಹಾಕುವ ಪಿನ್ ನುಂಗಿದ ಬಾಲಕಿ ಸಾವು
ಬಟ್ಟೆಗೆ ಹಾಕುವ ಪಿನ್ ನುಂಗಿದ್ದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಯ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಪಿನ್ ನುಂಗಿದ್ದ ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
8 ವರ್ಷದ ಸಪ್ನ ಮೃತ ದುರ್ದೈವಿಯಾಗಿದ್ದಾಳೆ.
ಏಪ್ರಿಲ್ 22 ರಂದು ಆಹಾರದ ಜೊತೆಗೆ ಅಚಾನಕ್ಕಾಗಿ ಬಟ್ಟೆಗೆ ಹಾಕುವ ಪಿನ್ ನುಂಗಿದ್ದಳು ಬಾಲಕಿ. ಆ ಬಳಿಕ
ಹೈದರಾಬಾದ್ ನ ಯಶೋಧರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾಳೆ.
ಕುರುಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.