ಕಾಗೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಶುಭ ಮತ್ತು ಅಶುಭದ ಲಕ್ಷಣ ಎಂದು ಕರೆಯುತ್ತೇವೆ. ಕೆಲವೊಂದು ವಿಚಾರಕ್ಕೆ ಕಾಗೆ ಕೂಗುವುದು ಶುಭವಾದರೆ ಕೆಲವೊಂದು ಸಂದರ್ಭದಲ್ಲಿ ಅಶುಭವಾಗಿರುತ್ತದೆ. ಅಷ್ಟಕ್ಕೂ ರಾತ್ರಿ ಹೊತ್ತು ಕಾಗೆ ಕೂಗಿದರೆ ಏನು ಅರ್ಥ?
ಕಾಗೆಗಳು ರಾತ್ರಿ ಹೊತ್ತು ಕೂಗುವುದು ಅಪರೂಪ. ಸಾಮಾನ್ಯವಾಗಿ ಯಾವುದೇ ಪಕ್ಷಿಗಳು ಸಂಜೆಯಾದೊಡನೆ ಗೂಡು ಸೇರಿಕೊಂಡು ಬಿಡುತ್ತವೆ. ಹಾಗಿದ್ದರೂ ಕೆಲವೊಂದು ಸಂದರ್ಭದಲ್ಲಿ ಕಾಗೆಗಳು ರಾತ್ರಿ ಕೂಗುತ್ತವೆ. ಹೀಗೆ ಮಾಡಿದರೆ ನಿಮ್ಮ ಮನೆಗೆ ಯಾರೋ ಅತಿಥಿಗಳು ಬರುತ್ತಾರೆ ಎಂದು ಅರ್ಥವಾಗಿದೆ.
ಮನೆಯಿಂದ ಹೊರ ಹೋಗುವಾಗ ಕಾಗೆ ಕೂಗಿದರೆ ನೀವು ಹೋಗುವ ಕೆಲಸ ಯಶಸ್ವಿಯಾಗುತ್ತದೆ ಎಂದು ಅರ್ಥ. ಮನೆಯೊಳಗಿನಿಂದಲೇ ಹೊರಗೆ ಕಾಗೆ ಕೂಗುತ್ತಿರುವುದನ್ನು ನೋಡಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದರ್ಥ.
ಒಂದು ವೇಳೆ ಕಾಗೆಗಳು ತಲೆಯನ್ನು ಮುಟ್ಟಿದರೆ ಅದನ್ನು ದೋಷ ಎಂದು ಪರಿಗಣಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೀಗಾದರೆ ಪತಿ ವಿಯೋಗದ ಸೂಚನೆಯಾಗಿದೆ. ಅದೇ ರೀತಿ ಕಾಗೆ ಮಾಂಸ ಕಚ್ಚಿಕೊಂಡು ಹೋಗುವಾಗ ನೆಲಕ್ಕೆ ಬೀಳುವುದು ನೋಡಿದರೆ ಅನಾರೋಗ್ಯ ಕಾಡಲಿದೆ ಎಂದು ಅರ್ಥವಾಗಿದೆ.