ಶಮಿ ಪತ್ರೆಯಿಂದ ಯಾವ ದೇವರಿಗೆ ಪೂಜೆ ಮಾಡಿದರೆ ಏನು ಫಲ ದೊರೆಯುತ್ತದೆ ಎಂಬುದು ತಿಳಿಬೇಕಾ
ಬುಧವಾರ, 31 ಅಕ್ಟೋಬರ್ 2018 (14:58 IST)
ಬೆಂಗಳೂರು : ದೇವರಿಗೆ ಹೆಚ್ಚಾಗಿ ಹೂವಿನಿಂದ ಪೂಜೆ ಮಾಡುತ್ತಾರೆ ಆದರೆ ಕೆಲವೊಂದು ದೇವರಿಗೆ ಪತ್ರೆಗಳಿಂದ ಪೂಜೆಮಾಡುತ್ತಾರೆ. ಈ ಪತ್ರೆಗಳಲ್ಲಿ ಶಮಿ ಪತ್ರೆಯು ಒಂದು. ಈ ಪತ್ರೆಯಿಂದ ಯಾವ ದೇವರಿಗೆ ಪೂಜೆ ಮಾಡಿದರೆ ಏನು ಫಲ ದೊರೆಯುತ್ತದೆ ಎಂಬುದನ್ನು ತಿಳಿಯೋಣ.
ಶಮಿ ಪತ್ರೆ ಎಂದರೆ ಬನ್ನಿ ಮರದ ಪತ್ರೆ. ಸಾಮಾನ್ಯವಾಗಿ ಶಮಿ ಪತ್ರೆ ಶನೇಶ್ವರನಿಗೆ ಪ್ರಿಯವಾದದ್ದು, ಪಂಚಮ ಶನಿಕಾಟ, ಅಷ್ಟಮ ಶನಿಕಾಟ ಹಾಗೂ ಏಳೂವರೆ ವರ್ಷ ಶನಿ ಕಾಟ ಇರುವವರು ಶನೇಶ್ವರನಿಗೆ ಶನಿವಾರದಂದು ಪೂಜೆ ಮಾಡಿದರೆ ತೊಂದರೆ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಇತರ ಗ್ರಹಗಳಿಗೆ ಪೂಜೆ ಮಾಡಿದರೆ ಶುಭಫಲ ದೊರಕುತ್ತದೆ. ಕೆಲವರಿಗೆ ಬಹಳ ಕಾಲದಿಂದ ಆರೋಗ್ಯದಲ್ಲಿ ತೊಂದರೆ ಇದ್ದು ನರಳಾಟ, ನೋವು ಸಂಕಟವಿದ್ದಾಗ ಈಶ್ವರನಿಗೆ ಪ್ರತಿ ಸೋಮವಾರ ಈ ಪತ್ರೆಯಿಂದ ಪೂಜೆ ಮಾಡಿದರೆ ಆರೋಗ್ಯ ಲಭಿಸುತ್ತದೆ.
ಮನೆಯಲ್ಲಿ ಅಶಾಂತಿ, ಕುಟುಂಬದಲ್ಲಿ ಕಲಹದಂತಹ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಶಮೀಪತ್ರೆಯಿಂದ ಪೂಜೆ ಮಾಡಿದರೆ ಶುಭ, ನೆಮ್ಮದಿ, ಶಾಂತಿ ದೊರಕುತ್ತದೆ. ಜನ್ಮಾಂತರದ ಪಾಪ ಕರ್ಮಗಳು, ಮನೆಯಲ್ಲಿ ಶುಭಕಾರ್ಯಗಳಿಗೆ ತೊಂದರೆ, ಮಕ್ಕಳ ಆರೋಗ್ಯ ವಿದ್ಯಾಭ್ಯಾಸ ವಿವಾಹ ಮುಂತಾದವುಗಳಲ್ಲಿ ತೊಂದರೆ ಇದ್ದಾಗ ಶ್ರೀಚಕ್ರ ಸಮೇತ ಯಾವುದೇ ದೇವಿ ದೇವಸ್ಥಾನಕ್ಕೆ ಹೋಗಿ ಶಮೀಪತ್ರೆಯಿಂದ ಪೂಜೆ ಮಾಡಿದರೆ ಒಳ್ಳೇದಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.