ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತುವಿನಿಂದ ಪೂಜೆ ಮಾಡಬೇಕೆಂಬುದು ತಿಳಿಬೇಕಾ?

ಶುಕ್ರವಾರ, 12 ಏಪ್ರಿಲ್ 2019 (10:34 IST)
ಬೆಂಗಳೂರು : ಪ್ರತಿಯೊಬ್ಬರು ದೇವರನ್ನು ಪೂಜೆ ಮಾಡುತ್ತಾರೆ. ಆದರೆ ರಾಶಿಗನುಗುಣವಾಗಿ ಪೂಜೆ ಮಾಡಿದ್ರೆ ಯಶಸ್ಸು ಬೇಗ ಸಿಗುತ್ತೆ ಎನ್ನಲಾಗುತ್ತದೆ. ಹಾಗೇ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದನ್ನು ಮೊದಲು ತಿಳಿದುಕೊಳ್ಳಿ.


ಮೇಷ : ಈ ರಾಶಿಯವರ ದೊಡ್ಡ ಸಮಸ್ಯೆ ಚಂಚಲತೆ. ಹನುಮಂತನ ಆರಾಧನೆ ಮಾಡುವುದು ಉತ್ತಮ. ಪೂಜೆ ವೇಳೆ ಕೆಂಪು ಹೂವನ್ನು ಬಳಸಬೇಕು.

ವೃಷಭ : ಈ ರಾಶಿಯವರ ದೊಡ್ಡ ಸಮಸ್ಯೆ ಹಠಮಾರಿತನ. ಶಿವನ ಆರಾಧನೆ ಮಾಡಬೇಕು. ಬಿಳಿ ಚಂದನ ಬಳಸಿ ಪೂಜೆ ಮಾಡಬೇಕು.

ಮಿಥುನ : ಸಂದಿಗ್ಧತೆ ಇವರ ದೊಡ್ಡ ಸಮಸ್ಯೆ. ಶ್ರೀಕೃಷ್ಣನ ಪೂಜೆ ಬೆಸ್ಟ್. ಗುಗ್ಗುಲ ಧೂಪದಿಂದ ಪೂಜೆ ಮಾಡಬೇಕು.

ಕರ್ಕ : ಭಾವನಾತ್ಮಕತೆ ನಿಮ್ಮ ದೊಡ್ಡ ಸಮಸ್ಯೆ. ಶಿವನ ಆರಾಧನೆ ಮಾಡಬೇಕು. ಪೂಜೆ ವೇಳೆ ಶಂಖವನ್ನು ಅವಶ್ಯವಾಗಿ ಬಳಸಬೇಕು.

ಸಿಂಹ : ಜೀವನದ ಹೋರಾಟ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯ ದೇವನ ಆರಾಧನೆ ಮಾಡಬೇಕು. ಕುಂಕುಮವನ್ನು ಪೂಜೆಗೆ ಬಳಸಬೇಕು.

ಕನ್ಯಾ : ಧನದ ಹಿಂದೆ ಓಡುವುದು ನಿಮ್ಮ ದೊಡ್ಡ ಸಮಸ್ಯೆ. ದೇವಿ ಮಾತೆಯ ಪೂಜೆ ಮಾಡಬೇಕು. ಶುದ್ಧ ತುಪ್ಪದ ದೀಪವನ್ನು ಬೆಳಗಬೇಕು.

ತುಲಾ : ಅಜಾಗರೂಕತೆ ನಿಮ್ಮ ದೊಡ್ಡ ಸಮಸ್ಯೆ. ಭಗವಂತ ಕೃಷ್ಣನ ಪೂಜೆ ಮಾಡಬೇಕು. ಬಿಳಿ ಬಣ್ಣದ ಹೂ ಬಳಸಬೇಕು.

ವೃಶ್ಚಿಕ : ನಿಧಾನಗತಿ ಜೀವನ ಇವ್ರ ಸಮಸ್ಯೆ. ಹನುಮಂತನ ಆರಾಧನೆ ಮಾಡಬೇಕು. ಪೂಜೆ ವೇಳೆ ತುಳಸಿ ದಳವನ್ನು ಬಳಸಬೇಕು.

ಧನು : ನಿಮ್ಮ ಧ್ವನಿ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯನ ಆರಾಧನೆ ಮಾಡಬೇಕು. ಬಿಳಿ ಮಿಠಾಯಿಯನ್ನು ಪೂಜೆಗೆ ಬಳಸಿ.

ಮಕರ : ಆರೋಗ್ಯದ ಬಗ್ಗೆ ಉದಾಸೀನತೆ ದೊಡ್ಡ ಸಮಸ್ಯೆ. ಶಿವನ ಪೂಜೆ ಮಾಡಬೇಕು. ಹಳದಿ ಬಣ್ಣದ ಹೂವನ್ನು ಬಳಸಬೇಕು.

ಕುಂಭ : ಬೇರೆಯವರ ಜವಾಬ್ದಾರಿ ಮೈಮೇಲೆಳೆದುಕೊಳ್ಳುವುದು ದೊಡ್ಡ ಸಮಸ್ಯೆ. ಶ್ರೀ ಕೃಷ್ಣನ ಪೂಜೆ ಮಾಡಬೇಕು. ಚಂದನದ ಸುವಾಸನೆಯುಳ್ಳ ಧೂಪವನ್ನು ಬಳಸಬೇಕು.

ಮೀನ : ಜವಾಬ್ದಾರಿ ಬಗ್ಗೆ ಅಜಾಗರೂಕತೆ. ಗಣೇಶನ ಪೂಜೆ ಮಾಡಬೇಕು. ಪೂಜೆ ವೇಳೆ ಲಾಡನ್ನು ಬಳಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ