ವಿನಾಯಕನ ಸೊಂಡಿಲು ಯಾವ ದಿಕ್ಕಿಗಿದ್ದರೆ ಏನು ಫಲ ಎಂದು ತಿಳಿಯಬೇಕಾ...?

ಗುರುವಾರ, 11 ಜನವರಿ 2018 (07:15 IST)
ಬೆಂಗಳೂರು : ಸಾಮಾನ್ಯವಾಗಿ ವಿನಾಯಕನ ಪ್ರತಿಮೆಯನ್ನು ಇಡುವುದು, ಪೂಜೆಮಾಡುವುದು, ವಿಸರ್ಜಿಸುವುದು ಎಲ್ಲಾ ಸಹಜ. ವಿನಾಯಕನ ಮೂರ್ತಿಗೆ  ಸೊಂಡಿಲು ಯಾವ ದಿಕ್ಕಿಗೆ ಇರುತ್ತದೆ ಎಂದು ಯಾರು ಅಷ್ಟಾಗಿ ಗಮನಿಸಿರುವುದಿಲ್ಲ. ಆದರೆ ಇದರಲ್ಲೂ ಒಂದು ವಿಶೇಷವಿದೆ.


ಮನೆಯಲ್ಲಿ , ಬೀದಿಗಳಲ್ಲಿ ಮಂಟಪಗಳಲ್ಲಿ ಇಡುವ ಗಣೇಶನ ವಿಗ್ರಹದಲ್ಲಿ ಸೊಂಡಿಲು ಎಡಕ್ಕೆ ತಿರುಗಿರುತ್ತದೆ. ದೇವಾಲಯಗಳಲ್ಲಿ ಇಡುವ ವಿನಾಯಕನ ಸೊಂಡಿಲು ಬಲಕ್ಕೆ ತಿರುಗಿ, ಇಲ್ಲವಾದರೆ ನೇರವಾಗಿ ಇರುವುದು ಕಂಡುಬರುತ್ತದೆ. ಆದರೆ ಈ ಮೂರು ಕಡೆಯಲ್ಲಿ ಒಂದೊಂದು ಕಡೆಯಲ್ಲಿ ಇರುವ ವಿನಾಯಕನನ್ನು ಪೂಜಿಸಿದರೆ ಒಂದೊಂದು ವಿಧವಾದ ಫಲ ಸಿಗುತ್ತದೆ. ಅದೇನೆಂದರೆ ಎಡಬದಿಗೆ ಸೊಂಡಿಲು ವಿನಾಯಕನ್ನು ಪೂಜಿಸಿದರೆ ಮನೆಯಲ್ಲಿರುವ ವಾಸ್ತುದೋಷ ಪರಿಹಾರವಾಗುತ್ತದೆಯಂತೆ ಹಾಗೆ ಮನೆಯವರ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆಯಂತೆ. ಜೊತೆಗೆ ಪಾರ್ವತಿದೇವಿಯ ಆಶೀರ್ವಾದ ಕೂಡ ಆ ಮನೆಯವರಿಗೆ ಇರುತ್ತದೆಯಂತೆ. ಮನೆಯಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆಯಂತೆ.


ಬಲಕ್ಕೆ ಸೊಂಡಿಲಿರುವ ವಿನಾಯಕನ್ನು ಸಿದ್ಧಿವಿನಾಯಕ ಎಂದು ಕರೆಯುತ್ತಾರಂತೆ, ಈ ರೀತಿ ಸೊಂಡಿಲು ಗಣೇಶನನ್ನು ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆಯಂತೆ. ಆದರೆ ಸೊಂಡಿಲು ನೇರವಾಗಿರುವ ಗಣೇಶನ ವಿಗ್ರಹ ತುಂಬಾ ಅಪರೂಪಕ್ಕೆ ಕಾಣಸಿಗುತ್ತದೆ. ಈ ವಿಧದ ಗಣೇಶನನ್ನು ಪೂಜಿಸಿದರೆ ಅಂದುಕೊಂಡ ದೊಡ್ಡ ಕಾರ್ಯಗಳೆಲ್ಲವೊ ನೇರವೆರುತ್ತದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ