ಹಿಮ ಬಿರುಗಾಳಿಗೆ ತತ್ತರಿಸಿ ಹೋದ ಚೀನಾ; 13 ಮಂದಿ ಸಾವು

ಶನಿವಾರ, 6 ಜನವರಿ 2018 (13:37 IST)
ಬೀಜಿಂಗ್‌: ಚೀನಾದ ಪೂರ್ವ ಭಾಗದಲ್ಲಿ ಅತಿಯಾದ ಹಿಮ ಬಿರುಗಾಳಿ ಬೀಸಿದ ಪರಿಣಾಮ ಕಳೆದ ಮೂರು ದಿನಗಳಲ್ಲಿ 13 ಜನ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದು 2008ರ ನಂತರ ಕಾಣಿಸಿದ ಅತೀ ತೀವ್ರವಾದ ಹಿಮ ಬಿರುಗಾಳಿ ಆಗಿದೆಯಂತೆ. ಹಾಗಾಗಿ ಇದರ ಪರಿಣಾಮದಿಂದ ಸಾಕಷ್ಟು ಜನರಿಗೆ ತೊಂದರೆಯಾಗಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮದ ವರದಿಯಲ್ಲಿ ತಿಳಿದು ಬಂದಿದೆ.


ಅದೂ ಅಲ್ಲದೆ, ಅನ್ಹುಯ್‌, ಹೆನನ್‌, ಜಿಯಾಂಗ್ಸು ಸೇರಿ ಒಂಬತ್ತು ನಗರಗಳು ಅತೀ ಹೆಚ್ಚಿನ ಹಿಮ ಮಾರುತಕ್ಕೆ ಒಳಗಾಗಿದ್ದು ಸಾಕಷ್ಟು ಆರ್ಥಿಕ ವಲಯ ಹಾಗೂ ಕೃಷ್ಟಿ ವಲಯದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ