ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕಿನ ಬಾಗಿಲಿಗೆ ಯಾವ ರೀತಿಯ ಬೀಗ ಬಳಸಿದರೆ ಉತ್ತಮ ಎಂಬುದು ತಿಳಿಬೇಕಾ?

ಶನಿವಾರ, 14 ಜುಲೈ 2018 (06:23 IST)
ಬೆಂಗಳೂರು : ಹಿಂದಿನಿಂದಲೂ ಭಾರತೀಯರು ವಾಸ್ತು ಶಾಸ್ತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಹಾಗೇ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ವಾಸ್ತು ಅನ್ವಯವಾಗುತ್ತದೆ. ಯಾವ ವಸ್ತು ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ವಾಸ್ತುಶಾಸ್ತ್ರ ತಿಳಿಸುತ್ತದೆ. ಅದೇರೀತಿ ಮನೆಯ ಬಾಗಿಲುಗಳಿಗೆ ಯಾವ ರೀತಿಯ ಬೀಗಗಳನ್ನು ಬಳಸಬೇಕು ಎಂಬುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.


*ಪೂರ್ವ ದಿಕ್ಕು ಸೂರ್ಯ ದೇವರಿಗೆ ಮೀಸಲಿಟ್ಟಿರುವುದು. ಈ ಭಾಗದಲ್ಲಿ ನೀವು ಕೆಂಪು ಅಥವಾ ಇದೇ ರೀತಿಯ ಬಣ್ಣದ ಬೀಗ ಬಳಸಬಹುದು. ಈ ಬೀಗವು ತಾಮ್ರದಿಂದದ ಮಾಡಲ್ಪಟ್ಟಿರಬೇಕು. ಇದು ನಿಮ್ಮ ಮನೆಯನ್ನು ರಕ್ಷಿಸುವುದು. ಇದು ಮನೆಯನ್ನು ಕಳ್ಳತನದಿಂದ ರಕ್ಷಿಸುವುದು.

*ಪಶ್ಚಿಮ ದಿಕ್ಕು ಶನಿ ದೇವರಿಗೆ ಮೀಸಲು ಎಂದು ತಿಳಿಯಲಾಗಿದೆ. ಈ ಭಾಗದಲ್ಲಿ ನೀವು ಕಪ್ಪು ಬಣ್ಣದ ಬೀಗವು ಕಬ್ಬಿಣದಿಂದ ಮಾಡಲ್ಪಟ್ಟಿರುವುದನ್ನು ಬಳಸಬೇಕು. ಬೀಗವು ತುಂಬಾ ಭಾರವಾಗಿರಲಿ. ಈ ಭಾಗದಲ್ಲಿ ತಾಮ್ರದಿಂದ ಮಾಡಿರುವಂತಹ ಬೀಗ ಬಳಸಬೇಡಿ

*ಉತ್ತರ ಭಾಗದಲ್ಲಿ ನೀವು ಹಿತ್ತಾಳೆ ಬಣ್ಣದ ಬೀಗ ಬಳಸಿಕೊಳ್ಳಬೇಕು. ಇತರ ಯಾವುದೇ ಬಣ್ಣದ ಬೀಗ ಬಳಸಬೇಡಿ. ಈ ಬೀಗಗಳು ಕೆಂಪು ಅಥವಾ ಅದೇ ರೀತಿಯ ಬಣ್ಣದ್ದಾಗಿರಲಿ. ನೀವು ಈ ದಿಕ್ಕಿನಲ್ಲಿ ದೊಡ್ಡ ಕೋಣೆ ಅಥವಾ ಫ್ಯಾಕ್ಟರಿ ಬಾಗಿಲು ಇದ್ದರೆ ಆಗ ನೀವು ಐದು ಬೀಗ ಬಳಸುವುದು ಸುರಕ್ಷಿತ.


*ದಕ್ಷಿಣ ಭಾಗಕ್ಕೆ ನೀವು ಐದು ಖನಿಜಗಳಿಂದ (ಪಂಚ ಲೋಹ) ಮಾಡಿರುವಂತಹ ಬೀಗ ಬಳಸಿಕೊಳ್ಳಿ. ಈ ಬೀಗವು ಕೆಂಪು ಬಣ್ಣದ್ದಾಗಿರಬೇಕು ಮತ್ತು ಭಾರವಾಗಿರಲಿ. ಇದು ನಿಮ್ಮ ಸಂಪತ್ತನ್ನು ಸುರಕ್ಷಿತವಾಗಿ ಕಳ್ಳರಿಗೆ ಸಿಗದಂತೆ ನೋಡಿಕೊಳ್ಳುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ