ಮಹಾವಿಷ್ಣು: ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವಿಗೆ ತುಳಸಿ, ಕಿಸ್ಕಾರ ಹೂಗಳಿಂದ ಪೂಜೆ ಮಾಡಿದರೆ ಅತ್ಯಂತ ಶ್ರೇಯಸ್ಕರವಾದುದು. ತುಳಸಿ ಲಕ್ಷ್ಮೀ ದೇವಿಯನ್ನು ಪ್ರತಿನಿಧಿಸುತ್ತದೆ.
ಶ್ರೀಕೃಷ್ಣ: ಮಹಾವಿಷ್ಣುವಿನ ಅಂಶವಾದ ಕೃಷ್ಣನನ್ನು ಪೂಜೆ ಮಾಡುವಾಗ ತುಳಸಿ, ಪಾರಿಜಾತ ಪುಷ್ಪ ತಪ್ಪದೇ ಇರಲೇಬೇಕು.
ಗಣಪತಿ: ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠವಾದುದು. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ
ಆಂಜನೇಯ: ವಾನರ ರೂಪಿ, ಆಂಜನೇಯನಿಗೆ ಮಲ್ಲಿಗೆ ಹೂವೆಂದರೆ ಬಲು ಇಷ್ಟ. ಆಂಜನೇಯನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಿದರೆ ಆತ ಪ್ರಸನನ್ನಾಗುತ್ತಾನೆ.
ಕೆಂಪು ದಾಸವಾಳ: ದುರ್ಗೆ, ಕಾಳಿ, ಚಾಮುಂಡಿ ಸೇರಿದಂತೆ ಅಮ್ಮನವರ ಪೂಜೆಯಲ್ಲಿ ಕೆಂಪು ಬಣ್ಣದ ದಾಸವಾಳವಿದ್ದರೆ ಅದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಕಮಲ: ಲಕ್ಷ್ಮೀ ದೇವಿ ಎಂದರೆ ಪಕ್ಕನೇ ನೆನಪಾಗುವುದು ಕಮಲದ ಹೂವುಗಳು. ಲಕ್ಷ್ಮೀ ದೇವಿಯನ್ನು ಕಮಲದ ಹೂವುಗಳಿಂದ ಪೂಜಿಸಿದರೆ ವಿಶೇಷವಾಗಿರುತ್ತದೆ.
ಸರಸ್ವತಿ: ಸರಸ್ವತಿ ದೇವಿಯನ್ನು ಪೂಜೆ ಮಾಡುವಾಗ ಪಾಲಾಶ ಹೂವನ್ನು ಇಡುವುದು ವಾಡಿಕೆ. ಈ ಹೂವುಗಳನ್ನು ಜ್ಞಾನದ ಸಂಕೇತ ಎನ್ನಲಾಗುತ್ತದೆ.
ಶಿವ: ಭಗವಾನ್ ಶಿವನಿಗೆ ಬಿಲ್ವಪತ್ರೆಯೇ ಮೆಚ್ಚಿನ ಹೂವು. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆಯಿಂದ ಅರ್ಚಿಸಿದರೆ ನಮ್ಮ ಅನೇಕ ದೋಷ ನಿವಾರಣೆಯಾಗುವುದು.