ಜೀವ ಬಿಡುವ ಒಂದು ದಿನ ಮುಂಚೆ ಒಬ್ಬ ವ್ಯಕ್ತಿಗೆ ಈ ಎಲ್ಲಾ ಅನುಭವಗಳಾಗುತ್ತವೆ

Krishnaveni K

ಗುರುವಾರ, 18 ಜುಲೈ 2024 (08:31 IST)
ಬೆಂಗಳೂರು: ಮೃತ್ಯು ಎನ್ನುವುದು ಯಾರನ್ನೂ ಬಿಡದು. ಆದರೆ ಮನುಷ್ಯ ತನ್ನ ಜೀವನದ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದೇನೆ ಎಂದು ದೇವರು ಮೊದಲೇ ಸೂಚನೆ ಕೊಡುತ್ತಾನಂತೆ. ಅದನ್ನು ನಾವು ಗುರುತಿಸಬೇಕಾಗುತ್ತದೆ. ಅಂತಹ ಸೂಚನೆಗಳು ಏನೇನು ಇಲ್ಲಿದೆ ನೋಡಿ.

ಶಿವಪುರಾಣದ ಪ್ರಕಾರ ಒಬ್ಬ ವ್ಯಕ್ತಿಗೆ ಮೃತ್ಯು ಸಮೀಪಿಸುವಾಗ ಆತ ತನ್ನನ್ನು ತಾನೇ ಮರೆತು ಹೋಗುತ್ತಾನೆ. ತನ್ನ ಗುರುತನ್ನೇ ಮರೆಯುವ ಸನ್ನಿವೇಶ ಕಂಡುಬರುತ್ತದೆ. ಮನುಷ್ಯ ದೇಹ ನಿಧಾನವಾಗಿ ನೀಲಿಗಟ್ಟಲು ಆರಂಭವಾಗುತ್ತದೆ. ಜೀವ ಹೋಗುವ ಕೆಲವು ಕ್ಷಣ ಮೊದಲು ಒತ್ತಡದ ಹಾರ್ಮೋನ್ ಗಳು ಹೆಚ್ಚು ಬಿಡುಗಡೆಯಾಗಿ ವ್ಯಕ್ತಿ ಭಾವುಕನಾಗುತ್ತಾನೆ.

ಸಾಯುವ ಕೆಲವೇ ಕ್ಷಣಗಳ ಮೊದಲು ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ಒಬ್ಬ ವ್ಯಕ್ತಿ ಯಾವುದೋ ಭ್ರಮಾ ಲೋಕದಲ್ಲಿದ್ದಂತೆ ಅನುಭವ ಪಡೆಯುತ್ತಾನೆ. ಇನ್ನು ಗರುಡ ಪುರಾಣದ ಪ್ರಕಾರ ಮನುಷ್ಯ ಸಾಯುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ತನ್ನ ಹಳೆಯ ತಪ್ಪುಗಳನ್ನೆಲ್ಲಾ ನೆನೆಯುತ್ತಾನೆ.

ಇನ್ನೇನು ಸಾವು ಸಂಭವಿಸುತ್ತದೆ ಎನ್ನುವಾಗ ಒಬ್ಬ ವ್ಯಕ್ತಿ ಈ ಲೋಕವನ್ನು ಮರೆತು ಬಿಡುತ್ತಾನೆ. ಆತನಿಗೆ ಯಮ ಕಿಂಕರರು ಕಂಡುಬರುತ್ತಾರೆ. ಜೀವಿತಾವಧಿಯಲ್ಲಿ ಆತನ ಕರ್ಮಫಲಗಳಿಗೆ ಅನುಸಾರವಾಗಿ ಆತನನ್ನು ಸ್ವರ್ಗ ಅಥವಾ ನರಕಕ್ಕೆ ಯಮ ಧೂತರು ಕರೆದೊಯ್ಯುತ್ತಾರೆ ಎನ್ನುವುದು ನಂಬಿಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ