ಈ ದಿಕ್ಕಿನಲ್ಲಿ ಶಿವಲಿಂಗವನ್ನು ಪೂಜಿಸಿ ನಿಮ್ಮ ಆಸೆ ಈಡೇರಿಸಿಕೊಳ್ಳಿ
ಸೋಮವಾರ, 12 ಏಪ್ರಿಲ್ 2021 (07:06 IST)
ಬೆಂಗಳೂರು : ಶಿವನನ್ನು ಪ್ರತಿದಿನ ಪೂಜಿಸಿ ಆರಾಧಿಸಿದರೆ ನಿಮ್ಮ ಕೋರಿಕೆಗಳು ಎಂಬ ನಂಬಿಕೆ ಇದೆ. ಆದರೆ ಕೆಲವರಿಗೆ ಪ್ರತಿದಿನ ಶಿವನ ಪೂಜೆ ಸಾಧ್ಯವಾಗದಿದ್ದರೆ ಸೋಮವಾರದಂದು ಉಪವಾಸ ವ್ರತ ಮಾಡಬಹುದು. ಇದರಿಂದ ಕೂಡ ನಿಮ್ಮ ಕೋರಿಕೆ ಈಡೇರುತ್ತದೆ. ಆದರೆ ಶಿವಲಿಂಗವನ್ನು ಪೂಜಿಸುವಗ ಈ ನಿಯಮ ಪಾಲಿಸಬೇಕು.
*ಶಿವಲಿಂಗವನ್ನು ಪೂರ್ವಕ್ಕೆ ಮುಖ ಮಾಡಿ ಇಟ್ಟು ಪೂಜಿಸಬೇಕು.
*ಶಿವಲಿಂಗದ ಉತ್ತರ ದಿಕ್ಕಿನಲ್ಲಿ ಕುಳಿತು ಪೂಜಿಸಬಾರದು, ಆ ದಿಕ್ಕಿನಲ್ಲಿ ಶಿವನ ಅಂಗವಾದ ಉಮಾದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
*ಪೂಜೆ ಮಾಡುವಾಗ ಶಿವಲಿಂಗದ ಪಶ್ಚಿಮ ದಿಕ್ಕಿನಲ್ಲಿ ಅಂದರೆ ಹಿಂದೆ ನಿಂತುಕೊಳ್ಳಬಾರದು. ಇದರಿಂದ ಶುಭ ಫಲಿತಾಂಶ ಸಿಗುವುದಿಲ್ಲ.
*ಶಿವಲಿಂಗದ ದಕ್ಷಿಣ ದಿಕ್ಕಿನಲ್ಲಿ ಕುಳಿತು ಪೂಜಿಸಿದರೆ ನಿಮ್ಮ ಕೋರಿಕೆ ಈಡೇರುತ್ತದೆ.