ಆಷಾಢ ಮಾಸದ ನಾಲ್ಕು ಶುಕ್ರವಾರ ಯಾವ ದೇವಿಯನ್ನು ಆರಾಧಿಸಿದರೆ ಯಾವ ಫಲ?

ಶುಕ್ರವಾರ, 1 ಜುಲೈ 2022 (08:30 IST)
ಬೆಂಗಳೂರು: ಇಂದಿನಿಂದ ನಾಲ್ಕು ವಾರಗಳ ಕಾಲ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇಂದಿನಿಂದ ನಾಡದೇವತೆ ಚಾಮುಂಡೇಶ್ವರಿಗೆ ಮುಂದಿನ ನಾಲ್ಕು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ.

ಆಷಾಢ ಮಾಸದಲ್ಲಿ ಬರುವ ಈ ನಾಲ್ಕು ಶುಕ್ರವಾರ ಯಾವ ದೇವಿಯನ್ನು ಆರಾಧಿಸಿದರೆ ಏನು ಫಲ ಎಂದು ನೋಡೋಣ. ಇಂದು ಮೊದಲನೇ ಶುಕ್ರವಾರವಾಗಿದ್ದು, ಸ್ವರ್ಣಾಂಬಿಕಾ ದೇವಿಯನ್ನು ಆರಾಧಿಸಬೇಕು. ಇದರಿಂದ ಐಶ್ವರ್ಯ ವೃದ್ಧಿಯಾಗಲಿದೆ.

ಎರಡನೇ ಶುಕ್ರವಾರ ಕಾಳಿ ಸ್ವರೂಪಿ ದೇವಿಯನ್ನು ಆರಾಧಿಸುವುದರಿಂದ ವಿದ್ಯಾರ್ಥಿಗಳಿಗೆ ಬುದ್ಧಿ ಶಕ್ತಿ ಹೆಚ್ಚಿ, ಅಧ‍್ಯಯನದಲ್ಲಿ ಯಶಸ್ಸು ಸಿಗಲು ಅನುಕೂಲವಾಗಲಿದೆ.  ಮೂರನೇ ಶುಕ್ರವಾರ ಪಾರ್ವತಿ ದೇವಿಯ ರೂಪವಾದ ಕಾಳಿಕಾಂಬೆಯನ್ನು ಆರಾಧಿಸಬೇಕು. ಈ ದೇವಿಯು ಧೈರ್ಯ, ಆರೋಗ್ಯವನ್ನು ಕರುಣಿಸುತ್ತಾಳೆ.

ನಾಲ್ಕನೇ ಶುಕ್ರವಾರ ಕಾಮಾಕ್ಷಿ ಹಾಗೂ ಲಕ್ಷ್ಮೀ ದೇವಿಯ ಆರಾಧನೆ ಮಾಡಿದರೆ ಒಳಿತು. ಕೊನೆಯ ಶುಕ್ರವಾರ ಲಕ್ಷ್ಮೀ ದೇವಿಯನ್ನು ಆರಾಧಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗಿ ಕೌಟುಂಬಿಕವಾಗಿ ಸುಖ, ಸಮೃದ್ಧಿಯನ್ನು ಕರುಣಿಸುತ್ತಾಳೆ. ಆಷಾಢ ಮಾಸದ ಪ್ರತೀ ಶುಕ್ರವಾರದಂದು ದೇವಿ ಮೂರ್ತಿಗೆ ಅಲಂಕರಿಸಿ ಉಪವಾಸವಿದ್ದು ಮುತ್ತೈದೆಯರಿಗೆ ತಾಂಬೂಲ ನೀಡಿ ವ್ರತ ಆಚರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ