ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 29 ಜೂನ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಿದ್ಯಾರ್ಥಿಗಳಿಗೆ ಪರರ ಸಹಾಯದಿಂದ ಮುನ್ನಡೆ. ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ವಿಶೇಷ ವ್ಯಕ್ತಿಗಳ ಭೇಟಿ ಕೊಡಲಿದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ದಿನದಂತ್ಯಕ್ಕೆ ಸಂತೋಷದ ಸುದ್ದಿ.

ವೃಷಭ: ಸಾಂಸಾರಿಕವಾಗಿ ಕೆಲವೊಂದು ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ಮಿಥುನ: ಮಹಿಳೆಯರು ಗೃಹಕೃತ್ಯಗಳಿಂದ ಹೈರಾಣಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನಕ್ಕಾಗಿ ದುಪ್ಪಟ್ಟು ಪ್ರಯತ್ನ ಪಡಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ. ವೈಯಕ್ತಿಕ ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಚಿಂತೆ ಬೇಡ.

ಸಿಂಹ: ಬಚ್ಚಿಟ್ಟಿದ್ದ ವಿಚಾರಗಳು ಹೊರಗೆ ಬರಲಿವೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ಪಾಲು ಬಂಡವಾಳ ಹೂಡಿಕೆಯಿಂದ ಲಾಭ ಕಂಡುಕೊಳ್ಳಲಿದ್ದೀರಿ. ಸಹೋದರಿಯರ ಪ್ರೀತಿಗೆ ಪಾತ್ರರಾಗಲಿದ್ದೀರಿ.

ಕನ್ಯಾ: ವೃತ್ತಿರಂಗದಲ್ಲಿ ಬರುವ ಸಮಸ್ಯೆಗಳಿಗೆ ಕ್ರಿಯಾತ್ಮಕ ರೀತಿ ಪರಿಹಾರ ಕಂಡುಕೊ‍ಳ್ಳಲು ಪ್ರಯತ್ನಿಸಲಿದ್ದೀರಿ. ಹೊಸ ಜನರು, ಮಿತ್ರರ ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಕಂಡುಬರಲಿದೆ.

ತುಲಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ. ಮಕ್ಕಳಿಗೆ ಉಲ್ಲಾಸದಾಯಕ ದಿನ. ದಿನದಂತ್ಯಕ್ಕೆ ನೆಮ್ಮದಿ ಕಂಡುಬರುವುದು.

ವೃಶ್ಚಿಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಆದರೆ ಹಿತಶತ್ರುಗಳ ಕಾಟ ಕಂಡುಬರಲಿದೆ. ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಚಿಂತೆಯಾದೀತು.

ಧನು:  ಮನೆಯಲ್ಲಿ ಅಭಿವೃದ್ಧಿದಾಯಕ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸುವ ಅವಕಾಶಗಳು ಒದಗಿ ಬರಲಿವೆ.

ಮಕರ: ಎಷ್ಟೇ ದುಡಿಮೆಯಿದ್ದರೂ ತೃಪ್ತಿಯಿಲ್ಲದ ಮನೋಭಾವ ಕಂಡುಬರಲಿದೆ. ನೆರೆಹೊರೆಯವರೊಂದಿಗೆ ಅನಗತ್ಯ ವಿವಾದವಾಗದಂತೆ ಎಚ್ಚರಿಕೆ ವಹಿಸಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ದೂರದ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ಮೀನ: ಉದ್ಯೋಗ ಸಂಬಂಧವಾದ ಸಮಸ್ಯೆಗಳನ್ನು ಸಹೋದ್ಯೋಗಿಗಳ ನೆರವಿನಿಂದ ಪರಿಹರಿಸಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ