ನಿಮ್ಮದು ಆಶ್ಲೇಷ ನಕ್ಷತ್ರವೇ? ಹಾಗಿದ್ದರೆ ಇದನ್ನು ಓದಿ!

ಮಂಗಳವಾರ, 18 ಡಿಸೆಂಬರ್ 2018 (08:58 IST)
ಬೆಂಗಳೂರು: ಆಶ್ಲೇಷ ನಕ್ಷತ್ರ ಹೆಸರಿಗೆ ತಕ್ಕ ಹಾಗೆ ಹಠ, ಮುಂಗೋಪ ಜಾಸ್ತಿ ಇರುವ ಗುಣ ಸ್ವಭಾವಗಳನ್ನು ಹೊಂದಿದೆ ಎನ್ನಲಾಗುತ್ತದೆ.


ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಕಾರ್ಯ ಸಾಧನೆಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಈ ನಕ್ಷತ್ರದವರಿಗೆ ತಾವು ಹೇಳಿದ್ದೇ ನಡೆಯಬೇಕು ಎಂಬ ಹಠವಿರುತ್ತದೆ. ಅಲ್ಲದೆ, ತಮ್ಮ ಗುರಿ ಸಾಧನೆಗಾಗಿ ಯಾರನ್ನೂ ನಿಷ್ಠುರ ಮಾಡಿಕೊಳ್ಳಲೂ ತಯಾರಾಗಿರುತ್ತಾರೆ.

ಈ ಹಠದಿಂದಾಗಿಯೇ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ವೃತ್ತಿ ಜೀವನ ಉತ್ತಮವಾಗಿರುತ್ತದೆ. ಎಷ್ಟೇ ನಿಷ್ಠುರರಾಗಿದ್ದರೂ ಬಂಧು ವರ್ಗದವರ ಪ್ರೀತಿಗೂ ಪಾತ್ರರಾಗಿರುತ್ತಾರೆ. ಆದರೆ ಯಾರಾದರೂ ಏನಾದರೂ ದ್ರೋಹ ಬಗೆದರೆ ಬೇಗನೇ ಮರೆಯುವ ಸ್ವಭಾವದವರೂ ಅಲ್ಲ. ಆದರೆ ಜೀವನದುದ್ದಕ್ಕೂ ಅಧಿಕಾರ ಹೊಂದಿರುತ್ತಾರೆ. ಪುಶ್ಯ ಮತ್ತು ಅಶ್ವಿನಿ ನಕ್ಷತ್ರದವರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಒಟ್ಟಾರೆಯಾಗಿ ಜೀವನದಲ್ಲಿ ಅದೃಷ್ಟ ಮಾಡಿದವರು ಅಂತಾರಲ್ಲ? ಅದು ಈ ನಕ್ಷತ್ರದವರಿಗೆ ಹೇಳಿ ಮಾಡಿಸಿದಂತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ