ಮೂಲ ನಕ್ಷತ್ರದಲ್ಲಿ ಜನಿಸಿದರೆ ಮಹಿಳೆಗೆ ಅಪಾಯವೇ?

ಮಂಗಳವಾರ, 18 ಡಿಸೆಂಬರ್ 2018 (08:54 IST)
ಬೆಂಗಳೂರು: ಮೂಲ ನಕ್ಷತ್ರ ಎನ್ನುವುದು ಮಹಿಳೆಯರ ಪಾಲಿಗೆ ಶಾಪಗ್ರಸ್ತ ನಕ್ಷತ್ರ ಎಂದು ಧಾರ್ಮಿಕ ನಂಬಿಕೆ ಇರುವವರು ನಂಬುತ್ತಾರೆ. ಮಹಿಳೆಯ ವಿವಾಹ ಜೀವನಕ್ಕೆ ಈ ನಕ್ಷತ್ರ ತೊಡಕಾಗುತ್ತದೆ ಎನ್ನಲಾಗುತ್ತದೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಬದುಕುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಆದರೆ ವೈವಾಹಿಕ ಜೀವನ ಮಾತ್ರ ಅಷ್ಟೊಂದು ಸುಖಕರವಾಗಿರುವುದಿಲ್ಲ.

ಮೂಲ ನಕ್ಷತ್ರದಲ್ಲಿ ಜನಿಸಿದ ಹೆಣ್ಣನ್ನು ಮದುವೆಯಾದರೆ ಆ ಮನೆಯಲ್ಲಿ ಅತ್ತೆ, ಮೈದುನ ಮತ್ತು ಮಾವನ ಜೀವಕ್ಕೆ ಅಪಾಯವಿದೆ ಎಂಬುದು ಕೆಲವರ ನಂಬಿಕೆ. ಇದು ಸಂಪೂರ್ಣ ಸತ್ಯವಾಗಬೇಕೆಂದಿಲ್ಲ. ಆದರೆ ಮೂಲ ನಕ್ಷತ್ರದ ಜತೆಗೆ ಕುಜ 1,2, 7,8 ಅಥವಾ 12 ನೇ ಮನೆಯಲ್ಲಿದ್ದರೆ ಆಕೆಗೆ ಪತಿ ವಿಯೋಗದ ಅಪಾಯವಿದೆ ಎನ್ನಲಾಗುತ್ತದೆ.

ಹೀಗಾಗಿ ಈ ನಕ್ಷತ್ರದ ಮಹಿಳೆಯರು ಆದಿತ್ಯ ಮಂತ್ರ, ಕಾರ್ತಿಕೇಯ ಮಂತ್ರ, ವಿಷ್ಣು ಸಹಸ್ರನಾಮ, ದುರ್ಗಾ ಚಾಲೀಸ, ಹನುಮಾನ್ ಸ್ತೋತ್ರ, ಶನಿ ಸ್ತೋತ್ರ ಪಠಿಸಿದರೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ