ದಿನಕ್ಕೊಂದು ದಾನ: ವೀಳ್ಯದೆಲೆ, ಅಡಿಕೆ ದಾನ ಮಾಡಿದರೆ ಏನು ಫಲ?

ಮಂಗಳವಾರ, 16 ಏಪ್ರಿಲ್ 2019 (06:52 IST)
ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ವೀಳ್ಯದೆಲೆ ಮತ್ತು ಅಡಿಕೆ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.


ವೀಳ್ಯದೆಲೆ: ವೀಳ್ಯದೆಲೆ ದೇವತೆ ಧನಲಕ್ಷ್ಮೀ. ತಾಂಬೂಲ ದಾನವನ್ನು ಮಾಡುವುದರಿಂದ ಲಕ್ಷ್ಮೀ ಅನುಗ್ರಹ ಪ್ರಾಪ್ತಿಯಾಗುಗತ್ತದೆ. ಹಣದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಅಡಿಕೆ: ಅಡಿಕೆಗೆ ಸಂಸ್ಕೃತದಲ್ಲಿ ಪೂಗೀಫಲ ಎಂದು ಹೆಸರು. ಅಡಿಕೆಗೆ ಅಭಿಮಾನ ದೇವತೆ ಇಷ್ಟಲಕ್ಷ್ಮೀ. ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥಗಳು ನೆರವೇರುತ್ತದೆ. ಬರೀ ಅಡಿಕೆಯನ್ನು ತಿಂದರೆ ಬ್ರಹ್ಮ ಹತ್ಯಾ ದೋಷ ಬರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ