ಶಿವನ ಆರಾಧನೆಯ ಸಂಪೂರ್ಣ ಫಲ ಸಿಗಬೇಕಾದರೆ ಈ ಸ್ತೋತ್ರ ಹೇಳಬೇಕು
ಭಾನುವಾರ, 15 ಸೆಪ್ಟಂಬರ್ 2019 (08:37 IST)
ಬೆಂಗಳೂರು: ದೇವಾನುದೇವತೆಗಳಲ್ಲಿ ಅತ್ಯಂತ ಅನ್ಯೋನ್ಯವಾದ ದಂಪತಿಗಳು ಎಂದರೆ ಶಿವ-ಪಾರ್ವತಿಯರು. ಶಿವನು ಪಾರ್ವತಿಯನ್ನು ಎಷ್ಟು ಪ್ರೀತಿಸುತ್ತಿದ್ದನೆಂದರೆ ತನ್ನ ದೇಹದ ಅರ್ಧಭಾಗವನ್ನೇ ಪಾರ್ವತಿಗೆ ಕೊಟ್ಟು ಅರ್ಧನಾರೀಶ್ವರನಾಗಿದ್ದ.
ದೇವಿ ಪುರಾಣದಲ್ಲಿ ಶಿವನಿಲ್ಲದೇ ಪಾರ್ವತಿಯನ್ನು, ಪಾರ್ವತಿಯಿಲ್ಲದೇ ಶಿವನನ್ನು ಆರಾಧನೆ ಮಾಡುವುದರಿಂದ ಯಾವ ವ್ರತದ ಫಲವೂ ನಮಗೆ ಸಿಗಲಾರದಂತೆ. ಹೀಗಾಗಿ ದಾಂಪತ್ಯ ಚೆನ್ನಾಗಿರಬೇಕು ಎಂದು ವ್ರತ ಮಾಡುವಾಗ ಶಿವ ಪಾರ್ವತಿಯರಿಬ್ಬರ ಆರಾಧನೆಯನ್ನೂ ಮಾಡಬೇಕು.
ಅಂದರೆ ಶಿವ ಪಾರ್ವತಿಯರು ಒಟ್ಟಾಗಿ ವರ್ಣನೆ ಇರುವ ಶ್ಲೋಕವನ್ನು ಸ್ತುತಿಸಬೇಕು. ಪ್ರತಿನಿತ್ಯವಲ್ಲದಿದ್ದರೂ ಪ್ರತೀ ಸೋಮವಾರದಂದು ಉಮಾಮಹೇಶ್ವರ ಸ್ತೋತ್ರ ಪಠಿಸುವುದರಿಂದ ನಿಮ್ಮ ದಾಂಪತ್ಯ ಚೆನ್ನಾಗಿರುವುದಲ್ಲದೆ, ಶಿವನ ಆರಾಧನೆಯ ಸಂಪೂರ್ಣ ಫಲ ದೊರೆಯುವುದು.