ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

Krishnaveni K

ಬುಧವಾರ, 25 ಡಿಸೆಂಬರ್ 2024 (08:43 IST)
ಬೆಂಗಳೂರು: ಬುಧವಾರ ಗಣೇಶನಿಗೆ ವಿಶೇಷವಾದ ದಿನವಾಗಿದ್ದು, ವಿಘ್ನ ವಿನಾಶಕನನ್ನು ಕುರಿತು ಪ್ರಾರ್ಥನೆ ಮಾಡಿದರೆ ಸಕಲ ಕಷ್ಟಗಳೂ ಪರಿಹಾರವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಗಣೇಶ ವಿಶೇಷವಾಗಿ ನಮ್ಮ ಜೀವನದಲ್ಲಿ ಬರುವ ಅಡೆತಡೆಗಳು, ಸಂಕಷ್ಟಗಳನ್ನು ನಿವಾರಿಸುವಾತ. ಅದಕ್ಕೇ ಏನೇ ಒಳ್ಳೆಯ ಕೆಲಸ ಮಾಡುವುದಿದ್ದರೂ ಮೊದಲು ವಿನಾಯಕನಿಗೇ ಪೂಜೆ ಸಲ್ಲಿಸಿ ಮುಂದುವರಿಯುತ್ತೇವೆ. ಸವಾಲುಗಳನ್ನು ಎದುರಿಸಿ ಮುನ್ನಡೆತಬೇಕೆಂದರೆ ಗಣೇಶನ ಈ ಎರಡು ಮಂತ್ರಗಳನ್ನು ಜಪಿಸಬೇಕು.

ತತ್ಪುರುಷಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್

ಈ ಮಂತ್ರ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳ್ನು ಎದುರಿಸಿ ನಿಲ್ಲುವ ಚೈತನ್ಯ, ಆತ್ಮಸ್ಥೈರ್ಯವನ್ನು ನಮಗೆ ನೀಡುತ್ತದೆ. ಗಣೇಶನ ಪವರ್ ಫುಲ್ ಮಂತ್ರಗಳಲ್ಲಿ ಇದು ಒಂದಾಗಿದೆ.

ಓಂ ನಮೋ ಸಿದ್ಧಿವಿನಾಯಕಾಯ ಸರ್ವಕಾರ್ಯಕರ್ತ್ರೇ
ಸರ್ವವಿಘ್ನಾಂಪ್ರಶಮ್ನಾಯ ಸರ್ವಜ್ಯ ವಶ್ಯಕರ್ಣಾಯ
ಸರ್ವಜನ ಸರ್ವಶ್ರೀ ಪುರುಷಾಕರ್ಷಣಾಯ ಶ್ರೀಂ ಓಂ ಸ್ವಾಹ

ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕುವ ಮುನ್ನ ಈ ಮಂತ್ರವನ್ನು ಹೇಳಿ ಮುಂದುವರಿದರೆ ಎಲ್ಲವೂ ಒಳಿತಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ