ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 21 ಡಿಸೆಂಬರ್ 2018 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಹಿತ ಶತ್ರುಗಳಿಂದ ಎಚ್ಚರವಾಗಿರಿ. ದೇವತಾ ಕಾರ್ಯಗಳಿಗೆ ಧನವಿನಿಯೋಗಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ.

ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಕಾರ್ಯದೊತ್ತಡದಿಂದ ಆಯಾಸಗೊಳ್ಳುವಿರಿ. ಆದರೆ ಕುಟುಂಬ ವರ್ಗದವರ ಸಹಕಾರದಿಂದ ನೆಮ್ಮದಿ.

ಮಿಥುನ: ಅನಿವಾರ್ಯವಾಗಿ ಖರ್ಚು ವೆಚ್ಚಗಳನ್ನು ಮಾಡಬೇಕಾಗಬಹುದು. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಕಚೇರಿಯಲ್ಲಿ ಒತ್ತಡದ ವಾತಾವರಣವಿರುತ್ತದೆ.

ಕರ್ಕಟಕ: ತಾಳ್ಮೆ ಸಮಾಧಾನವಿದ್ದರೆ ಇಂದಿನ ದಿನ ಶುಭದಿನವಾಗುತ್ತದೆ. ಕುಟುಂಬ ವರ್ಗದವರೊಂದಿಗೆ ಎಲ್ಲಾ ವಿಚಾರಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಾಗೆಯೇ ಖರ್ಚು ವೆಚ್ಚಗಳೂ ಅಧಿಕವಾಗುವುದು.

ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು ಗಳಿಸುತ್ತೀರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ. ಆದರೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಎಚ್ಚರದಿಂದ ವ್ಯವಹರಿಸಿ.

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿಯಾಗುತ್ತದೆ. ಗಣಪತಿಯನ್ನು ಪ್ರಾರ್ಥನೆ ಮಾಡುವುದರಿಂದ ಅಂದುಕೊಂಡ ಕೆಲಸಗಳು ನೆರವೇರಿ ಯಶಸ್ಸು ಲಭಿಸುತ್ತದೆ.

ವೃಶ್ಚಿಕ: ಇಂದು ನಿಮ್ಮ ಆರ್ಥಿಕ ಸ್ಥಿತಿಗತಿ ಸಮಸ್ಥಿತಿಯಲ್ಲಿರುವುದು. ವ್ಯವಹಾರಗಳಲ್ಲಿ ಕೊಂಚ ಹಿನ್ನಡೆಯಾದೀತು. ಆದರೆ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಲಭಿಸುವುದು.

ಧನು: ಕಾರ್ಯಕ್ಷೇತ್ರದಲ್ಲಿ ಒತ್ತಡದ ಅನುಭವವಾಗುವುದು. ಅನಿರೀಕ್ಷಿತ ಅತಿಥಿಗಳು ಆಗಮಿಸುವರು. ಮಾನಸಿಕವಾಗಿ ಕೊಂಚ ಕಿರಿ ಕಿರಿ ಅನುಭವಿಸುತ್ತೀರಿ.

ಮಕರ: ಕುಟುಂಬದಲ್ಲಿ ಸಹಕಾರ ಸಿಕ್ಕಿ ಕೈಗೊಂಡ ಕೆಲಸಗಳು ಯಶಸ್ವಿಯಾಗುವುದು. ಇದರಿಂದ ಸಂತಸದ ವಾತಾವರಣ ನೆಲೆ ನಿಲ್ಲಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.

ಕುಂಭ: ಆಪ್ತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಬಾಯ್ತಪ್ಪಿ ಆಡುವ ಮಾತುಗಳು ಇಂದು ಸಂಬಂಧಕ್ಕೆ ಕುತ್ತು ತರಬಹುದು. ದೇವರ ದರ್ಶನ ಪಡೆದರೆ ನೆಮ್ಮದಿ ಸಿಗುವುದು.

ಮೀನ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಸಹಕಾರ ದೊರಕಿ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಆದರೆ ಕುಟುಂಬದಲ್ಲಿ ಕೊಂಚ ಕಿರಿ ಕಿರಿ ಇದ್ದೀತು. ಆದರೆ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ