ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 3 ಫೆಬ್ರವರಿ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆ ಕೆಲಸಗಳಿಗಾಗಿ ಹೆಚ್ಚಿನ ಸಮಯ ಮೀಸಲಿಡಬೇಕಾದೀತು. ಸಹೋದರರ ಮದುವೆ ಸಂಬಂಧ ಓಡಾಡುವಿರಿ. ನಿರುದ್ಯೋಗಿಗಳಿಗೆ ತಕ್ಕ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಆರೋಗ್ಯದಲ್ಲಿ ಎಚ್ಚರ.

ವೃಷಭ: ಸಾಕಷ್ಟು ಧನಾಗಮನವಾಗಲಿದ್ದು, ಹೊಸ ವಸ್ತು ಖರೀದಿ ಬಗ್ಗೆಯೂ ಚಿಂತನೆ ಮಾಡುವಿರಿ. ಆದರೆ ಮಕ್ಕಳ ಉದಾಸೀನ ಪ್ರವೃತ್ತಿ ನಿಮ್ಮ ಚಿಂತೆ ಹೆಚ್ಚಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಮಿಥುನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂತಸ ಮೂಡುವುದು. ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ನೂತನ ದಂಪತಿಗಳು ಸರಸಮಯ ಕ್ಷಣ ಕಳೆಯುವರು. ಖರ್ಚಿನ ಬಗ್ಗೆ ಹಿಡಿತವಿರಲಿ.

ಕರ್ಕಟಕ: ಬಾಯಿ ಮಾತಿಗೆ ಕಡಿವಾಣ ಹಾಕುವುದು ಒಳ್ಳೆಯದು. ಸಂಗಾತಿಯೊಡನೆ ಮನಸ್ತಾಪವಾಗಲಿದೆ. ಆದರೆ ಕೊನೆಗೆ ನೀವೇ ರಾಜಿಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಬಲ ಅಗತ್ಯ.

ಸಿಂಹ: ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಪ್ರೇಮಿಗಳಿಗೆ ಮನೆಯಲ್ಲಿ ಹಿರಿಯರಿಂದ ವಿರೋಧ ವ್ಯಕ್ತವಾಗುವುದು. ಅವಿವಾಹಿತರು ಹೊಸ ವಿವಾಹ ಪ್ರಸ್ತಾಪಗಳಿಗಾಗಿ ಕಾಯಬೇಕಾಗುತ್ತದೆ. ಇಂದು ನೀವು ಶ್ರದ್ಧೆಯಿಂದ ಮಾಡುವ ಕೆಲಸಗಳಿಗೆ ದೇವರು ಫಲ ಕೊಟ್ಟೇ ಕೊಡುತ್ತಾನೆ.

ಕನ್ಯಾ: ಮನೆಯ ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾದೀತು. ಎಂತಹದ್ದೇ ಸಂಕಷ್ಟ ಬಂದರೂ ತಕ್ಕ ಸಮಯದಲ್ಲಿ ಸಹಾಯವೂ ಒದಗಿ ಕಷ್ಟದಿಂದ ಪಾರಾಗುವಿರಿ. ಕುಲದೇವರ ಆರಾಧನೆಯಿಂದ ಶುಭವಾಗಲಿದೆ.

ತುಲಾ: ಹೊಸ ವ್ಯವಹಾರಗಳಿಗೆ ಕೈ ಹಾಕಲು ಇಂದು ಪ್ರಶಸ್ತ ದಿನ. ಎಷ್ಟೋ ದಿನದಿಂದ ಬಾಕಿಯಿದ್ದ ಸಾಲಗಳು ಮರುಪಾವತಿಯಾಗಿ, ಆದಾಯ ಹೆಚ್ಚುವುದು. ಆದರೆ ಖರ್ಚಿನ ಬಗ್ಗೆ ಹಿಡಿತವಿರಲಿ. ದಿನದಂತ್ಯಕ್ಕೆ ಶುಭ ಸುದ್ದಿ.

ವೃಶ್ಚಿಕ: ನಿಮ್ಮ ನೆಚ್ಚಿನ ಹಳೆಯ ಮಿತ್ರರೊಬ್ಬರನ್ನು ಭೇಟಿಯಾಗುವಿರಿ. ಸಂಗಾತಿಯೊಡನೆ ಸರಸದ ಕ್ಷಣ ಕಳೆಯುವಿರಿ. ಮಕ್ಕಳಿಲ್ಲದ ದಂಪತಿಗೆ ಶುಭಸೂಚನೆಯಿದೆ. ಆರ್ಥಿಕವಾಗಿ ಧನಾಗಮನವಾಗುವುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಧನು: ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸಲು ದೇವಾಲಯವನ್ನು ಸಂದರ್ಶಿಸುವಿರಿ. ಮಕ್ಕಳಿಂದ ಶುಭ ವಾರ್ತೆ ಸಿಗುತ್ತದೆ. ಹಾಗಿದ್ದರೂ ಕಾರ್ಯದೊತ್ತಡ ಅಧಿಕವಿದ್ದು, ಓಡಾಟ ನಡೆಸಬೇಕಾಗುತ್ತದೆ.

ಮಕರ: ಮನಸ್ಸಿಗೆ ಹಿತವೆನಿಸದಿದ್ದರೂ ಇನ್ನೊಬ್ಬರ ಒಳಿತಿಗಾಗಿ ಯಾವುದಾದರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ತಾಳ್ಮೆ, ಸಹನೆಯಿಂದಿದ್ದರೆ ಮುಂದೆ ಶುಭ ಫಲವಿದೆ. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ.

ಕುಂಭ: ದಾಯಾದಿಗಳ ಕಲಹಕ್ಕೆ ಹಿರಿಯರ ಮೂಲಕ ಸಂಧಾನ ಮಾಡುವಿರಿ. ಆಸ್ತಿ ವ್ಯವಹಾರಗಳಲ್ಲಿ ಜಯ ಸಿಗುವುದು. ಸಂಗಾತಿ ನೀಡುವ ಸಮಯೋಚಿತ ಸಲಹೆ ನಿಮ್ಮನ್ನು ಕಾಪಾಡಲಿದೆ. ನಿರುದ್ಯೋಗಿಗಳಿಗೆ ಹೊಸ ಭರವಸೆ ಸಿಗಲಿದೆ.

ಮೀನ: ಮಾನಸಿಕವಾಗಿ ಯಾವುದೋ ಒಂದು ವಿಚಾರ ನಿಮ್ಮನ್ನು ಕಾಡುತ್ತಿದ್ದರೆ ಅದನ್ನು ಸಂಗಾತಿ ಬಳಿ ಹೇಳಿಕೊಂಡು ಹಗುರವಾಗುವುದು ಒಳ್ಳೆಯದು. ನಿಮ್ಮಲ್ಲೇ ಇಟ್ಟುಕೊಂಡರೆ ಮುಂದೊಂದು ದಿನ ದಂಪತಿ ನಡುವೆ ಕಲಹಕ್ಕೆ ಕಾರಣವಾದೀತು. ಮಿತ್ರರಿಗಾಗಿ ನಿಮ್ಮ ಇಷ್ಟ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ. ದೇವತಾ ಆರಾಧನೆಯಿಂದ ದಿನದಂತ್ಯಕ್ಕೆ ಶುಭವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ