ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 23 ಸೆಪ್ಟಂಬರ್ 2019 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ದೂರಾಲೋಚನೆಯ ಚಿಂತನೆಗಳು ಕಷ್ಟಕಾಲದಲ್ಲಿ ನಿಮ್ಮ ನೆರವಿಗೆ ಬರಲಿದೆ. ವಿರೋಧಿಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ. ಉದ್ಯೋಗದಲ್ಲಿ ಕಾರ್ಯದೊತ್ತಡವಿರಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.

ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ಮಾತಿನ ಮೇಲೆ ನಿಗಾ ಇರಲಿ. ಆರೋಗ್ಯದಲ್ಲಿ ಬಗ್ಗೆ ಕಾಳಜಿವಹಿಸಬೇಕು.

ಮಿಥುನ: ವೃತ್ತಿ ರಂಗದಲ್ಲಿ ನಿರೀಕ್ಷಿತ ಸ್ಥಾನ ಮಾನ ಸಿಗದೇ ಬೇಸರವಾಗಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಗೆಳೆಯರ ಸಹಾಯ ಸಿಗುವುದು. ಮಹಿಳೆಯರೊಂದಿಗೆ ಅತೀ ಸಲುಗೆ ಅಪವಾದಕ್ಕೆ ದಾರಿಯಾದೀತು. ಆರ್ಥಿಕ ವ್ಯವಹಾರದ ಬಗ್ಗೆ ಎಚ್ಚರ.

ಕರ್ಕಟಕ: ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನಿಮ್ಮ ಕೈ ಮೇಲಾಗುವುದು. ಆದಾಯವಿದ್ದಷ್ಟೇ ಖರ್ಚೂ ಇರುವುದು. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಇಷ್ಟಮಿತ್ರರ ಭೇಟಿ ಸಾಧ‍್ಯತೆಯಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

ಸಿಂಹ: ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಿಗೆ ಸಜ್ಜಾಗಬೇಕಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಯಾರನ್ನೂ ಅತಿಯಾಗಿ ನಂಬಿ ವ್ಯವಹಾರಕ್ಕಿಳಿಯಬೇಡಿ. ವ್ಯಾಪಾರ ವ್ಯವಹಾರದಲ್ಲಿ ಸಮಾಧಾನಕರ ಸ್ಥಿತಿಯಿರಲಿದೆ.

 
ಕನ್ಯಾ: ಉದ್ಯೋಗದಲ್ಲಿ ಮುನ್ನಡೆ ತೋರಿಬಂದು ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗದೇ ನಿರಾಸೆಯಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಖರ್ಚಿನ ಬಗ್ಗೆ ಕಡಿವಾಣ ಹಾಕಬೇಕಾಗುತ್ತದೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಸರಕಾರಿ ಕೆಲಸಗಳಲ್ಲಿ ಮುನ್ನಡೆಯಿರಲಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಬರಬಹುದು. ಕಾಳಜಿ ಅಗತ್ಯ.

ವೃಶ್ಚಿಕ: ದುಡುಕು ಮಾತಿನಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟುಮಾಡುವಿರಿ. ಸಂಬಂಧಗಳನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಸಾಮಾಜಿಕ ಕೆಲಸಗಳಲ್ಲಿ ಮುನ್ನಡೆ ಸಿಗಲಿದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗವಾಗುವುದು. ಸಾಂಸಾರಿಕವಾಗಿ ನೆಮ್ಮದಿ.

ಧನು: ನಿರುದ್ಯೋಗಿಗಳಿಗೆ ಮನಸ್ಸಿಗೆ ಹಿಡಿಸಿದ ಉದ್ಯೋಗ ಸಿಗಲಿದೆ. ಉದ್ಯೋಗಸ್ಥರು ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವರು. ಅಂದುಕೊಂಡ ಕಾರ್ಯ ನೆರವೇರಿಸಲು ಆಲಸ್ಯತನ ಕಾಡುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಅರೋಗ್ಯದಲ್ಲಿ ಸುಧಾರಣೆಯಿರಲಿದೆ.

ಮಕರ: ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಕ್ಷುಲ್ಲುಕ ವಾದ ವಿವಾದಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕುಂಭ: ದುಡುಕು ನಿರ್ಧಾರಗಳಿಂದ ಕಾರ್ಯ ಹಾಳು ಎಂಬುದನ್ನು ಮರೆಯಬೇಡಿ. ಕುಟುಂಬ ಸಮೇತ ಕಿರು ಪ್ರವಾಸ ಕೈಗೊಳ್ಳುವಿರಿ. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು. ಹೊಸ ಮಿತ್ರರ ಭೇಟಿಯಾಗುವಿರಿ. ವ್ಯವಹಾರದಲ್ಲಿ ಎಚ್ಚರ.

ಮೀನ: ನಿರುದ್ಯೋಗಿಗಳಿಗೆ ಉತ್ತಮ  ಅವಕಾಶಗಳು ಹುಡುಕಿಕೊಂಡು ಬರಲಿವೆ, ಬಳಸಿಕೊಳ್ಳುವ ಜಾಣತನ ಪ್ರದರ್ಶಿಸಬೇಕು. ಹಿರಿಯರ ಸಲಹೆ ಸೂಚನೆಗಳನ್ನು ಅಲಕ್ಷಿಸಬೇಡಿ. ಮಹಿಳೆಯರಿಗೆ ಇಂದು ಕೈ ಹಿಡಿದ ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ