ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 6 ಅಕ್ಟೋಬರ್ 2019 (05:33 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಇದುವರೆಗೆ ಇದ್ದ ಕಿರಿ ಕಿರಿಗಳು ನಿವಾರಣೆಯಾಗುವುದು. ಆರ್ಥಿಕವಾಗಿ ಅನಿರೀಕ್ಷಿತ ಧನಲಾಭವಾಗಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ದೂರ ಸಂಚಾರ ಸಾಧ್ಯತೆಯಿದೆ. ಪ್ರಯಾಣದಲ್ಲಿ ಎಚ್ಚರ.

ವೃಷಭ: ವ್ಯವಹಾರದಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ. ಹೊಸ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಖರ್ಚು ವೆಚ್ಚಗಳು ಹೆಚ್ಚುವುದು. ಒಣ ಪ್ರತಿಷ್ಠೆಯಿಂದ ಉತ್ತಮ  ಅವಕಾಶ ಕಳೆದುಕೊಳ್ಳುವಿರಿ.

ಮಿಥುನ: ಪೋಷಕರೊಂದಿಗೆ ಭಿನ್ನಾಭಿಪ್ರಾಯಗಳು ಮನಸ್ಸಿನ ನೆಮ್ಮದಿ ಹಾಳು ಮಾಡುವುದು. ಕೋರ್ಟು ಕಚೇರಿ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕರ್ಕಟಕ: ಹಳೆಯ ನೆನಪುಗಳು ಮನಸ್ಸಿಗೆ ಬೇಸರವುಂಟು ಮಾಡುವುದು. ಮಾನಸಿಕವಾಗಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಉದ್ಯೋಗ ಕ್ಷೇತ್ರದಲ್ಲಿ ವಿನಾಕಾರಣ ಸಂಕಷ್ಟಕ್ಕೆ ಸಿಲುಕುವಿರಿ. ಅಪವಾದದ ಭೀತಿಯಿದೆ. ವ್ಯವಹರಿಸುವಾಗ ಎಚ್ಚರ. ಕಿರು ಸಂಚಾರ ಯೋಗವಿದೆ.

ಸಿಂಹ: ಕುಟುಂಬ ಸದಸ್ಯರೊಂದಿಗೆ ತಾಳ್ಮೆ, ಸಮಾಧಾನದಿಂದ ಮುಂದುವರಿಯಿರಿ. ದುಡುಕು ಮಾತಿನಿಂದ ಕಾರ್ಯ ಹಾಳಾಗುವುದು. ವ್ಯವಹಾರ, ವೃತ್ತಿರಂಗದಲ್ಲಿ ಅತೀವ ಪ್ರಯತ್ನ ಅಗತ್ಯ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು.

 
ಕನ್ಯಾ: ಕೌಟುಂಬಿಕವಾಗಿ ಸಂತಸದ ದಿನಗಳಿವು. ಸಂಗಾತಿ, ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ದೈವಾನುಕೂಲದಿಂದ ನೀವು ಅಂದುಕೊಂಡ ಕೆಲಸಗಳು ನೆರವೇರುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ತುಲಾ: ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಎದುರಾಗಲಿವೆ. ಬಹಳ ದಿನಗಳ ನಂತರ ನ್ಯಾಯಾಲಯದಲ್ಲಿ ಪ್ರಕರಣಗಳು ನಿಮ್ಮ ಪರವಾಗಿ ಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಬಾಕಿ ಹಣ ಪಾವತಿಯಾಗಬಹುದು. ಮನಸ್ಸಿಗೆ ಕಿರಿ ಕಿರಿಯಾಗುವ ಘಟನೆಗಳು ನಡೆಯಲಿವೆ. ತಾಳ್ಮೆ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

ಧನು: ಪಾಲು ಬಂಡವಾಳ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವೃತ್ತಿರಂಗದಲ್ಲಿ ಹಿತ ಶತ್ರುಗಳ ಬಾಧೆ ಅನುಭವಕ್ಕೆ ಬರುವುದು. ಶುಭ ಕಾರ್ಯಗಳಿಗೆ ತಯಾರಿ ನಡೆಸುವಿರಿ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.

ಮಕರ: ಕಾರ್ಯ ಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ಅಂತಿಮ ಜಯ ನಿಮ್ಮದಾಗುವುದು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಮುನ್ನಡೆ ಕಂಡುಬರುವುದು. ನಿಮ್ಮ ಛಲದಿಂದ ಅಂದುಕೊಂಡಿದ್ದ ಕೆಲಸ ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡಬರುವುದು.

ಕುಂಭ: ಸಂಗಾತಿಯ ಮಾತು ಅಲಕ್ಷಿಸಿ ನಡೆದರೆ ತೊಂದರೆಗೆ ಸಿಲುಕಿಕೊಳ‍್ಳುವಿರಿ. ಕಾರ್ಯಕ್ಷೇತ್ರದಲ್ಲಿ ವಿನಾಕಾರಣ ಸಮಸ್ಯೆ ಮಾಡುವವರನ್ನು ಅಲಕ್ಷಿಸಿ ಮುಂದುವರಿಯುವುದೇ ಉತ್ತಮ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಉದ್ಯೋಗ ನಿಮಿತ್ತ ಕಿರು ಸಂಚಾರ ಮಾಡಬೇಕಾಗಬಹುದು.

ಮೀನ: ಹಿರಿಯರಿಗೆ ಮನಸ್ಸಿಗೆ ನೋವಾಗುವ ಹಾಗೆ ನಡೆದುಕೊಳ್ಳುವಿರಿ. ಆಪ್ತೇಷ್ಟರೊಂದಿಗೆ ಪ್ರವಾಸ, ಇಷ್ಟಭೋಜನ ಸಾಧ್ಯತೆಯಿದೆ. ಉದರ ಸಂಬಂಧೀ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ