ಗ್ರಹಗಳ ಸ್ಥಾನಕ್ಕನುಗುಣವಾಗಿ ನಿಮ್ಮ ಮಾತಿನ ಗುಣ ಹೇಗಿದೆ ತಿಳಿಯಿರಿ!

ಗುರುವಾರ, 3 ಅಕ್ಟೋಬರ್ 2019 (08:55 IST)
ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತ ಒಡೆದರೆ ಹೋಯಿತು ಎಂಬ ಮಾತಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಆಡುವ ಮಾತಿನಿಂದಲೇ ತಿಳಿಯಬಹುದು. ಇಂತಹ ಮಾತಿಗೆ ಯಾರು ಅಧಿಪತಿ, ಯಾವ ಗ್ರಹ ಮಾತಿನ ನಿಯಂತ್ರಕ ಎಂದು ತಿಳಿಯೋಣ.


ಮಾತಿಗೆ ಶುಭ ಗ್ರಹಗಳಾದ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳು ಕಾರಣ. ಜಾತಕ ಕುಂಡಲಿಯಲ್ಲಿ ಲಗ್ನದಿಂದ ಎರಡನೇ ಮನೆ ಮಾತಿಗೆ ಅಧಿಪತಿ. ಎರಡನೇ ಮನೆಯಲ್ಲಿ ಯಾವ್ಯಾವ ಗ್ರಹಗಳು ಇದ್ದರೆ ಮಾತು ಹೇಗಿರುತ್ತವೆ ಎಂದು ನೋಡೋಣ.

ಎರಡನೇ ಮನೆಯಲ್ಲಿ ರಾಹು ಅಥವಾ ಕುಜ
ಮೊದಲೇ ಕುಜ ಮತ್ತು ಗ್ರಹ ಎಂದರೆ ಕೇಳಬೇಕೇ? ಎರಡನೇ ಮನೆಯಲ್ಲಿ ರಾಹು ಅಥವಾ ಕುಜ ಗ್ರಹ ಇದ್ದ ವ್ಯಕ್ತಿಗಳ ಮಾತು ಒರಟಾಗಿರುತ್ತದೆ. ಇವರ ಮಾತನಾಡಿದರೆ ಇನ್ನೊಬ್ಬರ ಮನಸ್ಸಿಗೆ ನೋವಾಗಬಹುದು ಅಥವಾ ಹೇಳಬೇಕಾದುದನ್ನು ಖಡಕ್ ಆಗಿ ಹೇಳುವ ಸ್ವಭಾವದವರು ಇವರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ