ಮೇಷ: ಶುಭ ಮಂಗಲಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಲೆಕ್ಕಪತ್ರಗಳ ಬಗ್ಗೆ ಸರಿಯಾಗಿ ಮಾಹಿತಿ ಇಟ್ಟುಕೊಂಡಿರಬೇಕು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.
ವೃಷಭ: ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಮುನ್ನಡೆ ತೋರಿಬರಲಿದೆ. ಮನೆಯಲ್ಲಿ ದೇವತಾ ಕಾರ್ಯಕ್ರಮಗಳು ನಡೆಯಲಿವೆ. ಶಾಂತಿ ಸಮಾಧಾನ ಕಂಡುಕೊಳ್ಳಲು ಪ್ರಯತ್ನಿಸುವಿರಿ. ಆರ್ಥಿಕವಾಗಿ ಆದಾಯ ವೃದ್ಧಿಯಾದರೂ ಖರ್ಚಿನ ಬಗ್ಗೆ ನಿಗಾ ಇರಲಿ.
ಮಿಥುನ: ನೂತನ ಖರೀದಿ ವ್ಯವಹಾರದಲ್ಲಿ ಕೊಂಚ ನಷ್ಟವಾದೀತು. ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ. ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಪ್ರಯಾಣದಲ್ಲಿ ಎಚ್ಚರವಾಗಿರಬೇಕು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕರ್ಕಟಕ: ಕಚೇರಿ ಕೆಲಸಗಳಲ್ಲಿ ಉದ್ಯೋಗದ ಒತ್ತಡಗಳು ಮನಸ್ಸಿಗೆ ಕಿರಿ ಕಿರಿ ಉಂಟುಮಾಡಬಹುದು. ಮದುವೆ ಮಾತುಕತೆಗಳಿಗೆ ವಿಘ್ನಗಳು ಎದುರಾದೀತು. ಆರ್ಥಿಕವಾಗಿ ಚೇತರಿಕೆ ಕಂಡುಬರಬಹುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕು.
ಸಿಂಹ: ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ. ಸ್ವ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭ ಕಂಡುಬರುವುದು. ವ್ಯವಹಾರದಲ್ಲಿ ಪ್ರಗತಿ ಕಂಡುಬರುವುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಕನ್ಯಾ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳ ಹಾದಿ ಸುಗಮವಾಗಲಿದೆ. ನೂತನ ದಂಪತಿಗಳು ಅಮೂಲ್ಯ ಕ್ಷಣಗಳನ್ನು ಕಳೆಯುವರು. ಭೂ ಖರೀದಿ ವ್ಯವಹಾರಗಳು ಲಾಭ ತಂದುಕೊಡಲಿವೆ. ವೃತ್ತಿರಂಗದಲ್ಲಿ ಎಂದಿನ ಕಿರಿ ಕಿರಿ ಮುಂದುವರಿಯಲಿದೆ.
ತುಲಾ: ಒಂದು ರೀತಿಯ ಋಣಾತ್ಮಕ ಮನೋಭಾವದಿಂದ ನಿರುತ್ಸಾಹ ಕಂಡುಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದು. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ವೃಶ್ಚಿಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಅದಕ್ಕಾಗಿ ಓಡಾಟ ನಡೆಸಿ ದೇಹಾಯಾಸವಾಗಬಹುದು. ದಾಯಾದಿಗಳಿಂದ ಕಿರಿ ಕಿರಿ ಉಂಟಾಗಬಹುದು. ತಾಳ್ಮೆಯಿಂದ ಮುನ್ನಡೆಯಿರಿ. ದೇವತಾ ಪ್ರಾರ್ಥನೆ ಮಾಡಿ.
ಧನು: ಮನೆಯಲ್ಲಿ ಹೊಸ ಅತಿಥಿಯ ಆಗಮನಕ್ಕೆ ಸಿದ್ಧತೆ ನಡೆಸುವಿರಿ. ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ಕಲಾಕ್ಷೇತ್ರದಲ್ಲಿರುವವರಿಗೆ ಮುನ್ನಡೆ ಸಿಗುವುದು.
ಮಕರ: ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ ಮಾನಸಿಕ ಆರೋಗ್ಯವನ್ನು ಹಾಳು ಮಾಡಬಹುದು. ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟುಮಾಡಬೇಡಿ. ಮಹಿಳಾ ಉದ್ಯೋಗಿಗಳಿಗೆ ಸ್ಥಾನಪಲ್ಲಟವಾಗಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕುವಮ ಮೊದಲು ಯೋಚನೆ ಮಾಡಿ.
ಕುಂಭ: ಸಂಗಾತಿಯ ಮನೋಕಾಮನೆ ಪೂರೈಸಿ ಅವರ ಪ್ರೀತಿ ಗಳಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ವೃತ್ತಿರಂಗದಲ್ಲಿ ಸಮಾಧಾನದ ವಾತಾವರಣವಿರಲಿದೆ. ಭೂಮಿ ಖರೀದಿಗೆ ಇದು ಸಕಾಲ.
ಮೀನ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ದೇಹಾರೋಗ್ಯದಲ್ಲಿ ಏರುಪೇರಾದೀತು. ಉದರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ಕರೆಗಾಗಿ ಕೆಲವು ದಿನ ಕಾಯಬೇಕಾಗಬಹುದು.