ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 22 ಏಪ್ರಿಲ್ 2020 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ನಡೆಯಲಿದೆ. ಬಾಕಿ ಹಣ ಪಾವತಿಯಾಗುವುದರಿಂದ ಮನಸ್ಸಿಗೆ ಸಂತಸವಾಗಲಿದೆ. ಆದರೆ ಸಾಂಸಾರಿಕವಾಗಿ ಸಂಗಾತಿಯೊಂದಿಗಿನ ಮನಸ್ತಾಪ ಮನೆಯ ನೆಮ್ಮದಿ ಹಾಳುಮಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ದೇವರಲ್ಲಿ ಬೇಡಿದ್ದೊಂದೂ ನಡೆಯುತ್ತಿಲ್ಲ ಎಂಬ ನಿರಾಸೆ ಕಾಡಬಹುದು. ಪ್ರೀತಿ ಪಾತ್ರರ ಮಾತುಗಳು ಮನಸ್ಸಿಗೆ ಸಾಂತ್ವನ ನೀಡಬಹುದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ಇಷ್ಟ ಭೋಜನ ಸವಿಯುವ ಯೋಗವಿದೆ.

ಮಿಥುನ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ನಿಮ್ಮ ನೆಮ್ಮದಿಯನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ಶುಭವಾಗುವುದು. ನಿರುದ್ಯೋಗಿಗಳು ಸ್ವ ಉದ್ಯೋಗದ ಬಗ್ಗೆ ಯೋಚನೆ ನಡೆಸಲಿದ್ದೀರಿ.

ಕರ್ಕಟಕ: ವೃತ್ತಿರಂಗದಲ್ಲಿ ಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಕಾರ್ಮಿಕ ವರ್ಗದವರಿಗೆ ನಿತ್ಯದ ಅನ್ನ ಸಂಪಾದನೆಯ ಚಿಂತೆ ಕಾಡಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬರಬಹುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗಬಹುದು.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಗುರುತರ ಹೊಣೆಗಾರಿಕೆ ಹೆಗಲಿಗೇರಲಿದೆ. ಮಿತ್ರರ ಸಹಾಯದಿಂದ ಸಂಭಾವ್ಯ ಅಪಾಯ ತಪ್ಪಿಸಬಹುದು. ಸಾಮಾಜಿಕವಾಗಿ ನಿಮ್ಮ ಕ್ರಿಯಾತ್ಮಕ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ.

ಕನ್ಯಾ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ಬಹುದಿನಗಳ ಕನಸು ನನಸು ಮಾಡಲು ಮುಂದಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು. ದೂರ ಸಂಚಾರ ರದ್ದಾಗಲಿದೆ.

ತುಲಾ: ಪ್ರತಿನಿತ್ಯ ಮಾಡುವ ಕೆಲಸಗಳಿಗೆ ತೊಂದರೆ, ಅಡ್ಡಿ ಆತಂಕಗಳು ಎದುರಾಗಲಿದೆ. ಮನೆ ರಿಪೇರಿ ಕೆಲಸಗಳು ಅರ್ಧಕ್ಕೇ ಸ್ಥಗಿತಗೊಳ್ಳಲಿದೆ. ಗೃಹ ಬಳಕೆ ವಸ್ತುಗಳಿಗೆ ಖರ್ಚು ವೆಚ್ಚಗಳಾಗಬಹುದು. ವಿವಾಹಾದಿ ಶುಭ ಕಾರ್ಯಗಳು ಮುಂದೂಡಿಕೆಯಾಗಲಿದೆ.

ವೃಶ್ಚಿಕ: ಬಹುದಿನಗಳ ಬಳಿಕ ಹಳೆಯ ಮಿತ್ರನ ಭೇಟಿ, ಮಾತುಕತೆಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಚಿಂತೆಯಾಗಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ.

ಧನು: ಸಂಗಾತಿಯ ಬಹುದಿನಗಳ ಇಚ್ಛೆ ಪೂರೈಸಲು ಮುಂದಾಗುವಿರಿ. ವಿದ್ಯಾರ್ಥಿಗಳ ಆಲಸ್ಯತನ ಪೋಷಕರ ಚಿಂತೆಗೆ ಕಾರಣವಾಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡುಕೊಳ್ಳಲಿದ್ದಾರೆ.

ಮಕರ: ಉದ್ಯೋಗ ರಂಗದಲ್ಲಿ ಮೇಲಧಿಕಾರಿಗಳ ಸಲಹೆ ಸೂಚನೆ ಪಾಲಿಸಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಮನಸ್ಸು ಬಯಸುವ ಕೆಲಸ ಮಾಡುವುದರಿಂದ ನಿಮಗೂ ಒಳ್ಳೆಯದು. ಬೇಡದ  ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ನಿಮ್ಮ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ಸಾಂಸಾರಿಕವಾಗಿ ಸಂಗಾತಿಯ ಮಾತುಗಳಿಗೆ ಕಿವಿಗೊಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ದಾಯಾದಿ ಮತ್ಸರಗಳಿಂದ ಚಿಂತೆಯಾಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ. ಪಾಲು ಬಂಡವಾಳ ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ. ತಾಳ್ಮೆ ಅಗತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ