ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 2 ಆಗಸ್ಟ್ 2020 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನಸ್ಸಿಗೆ ಹಿತವೆನಿಸುವ ಕೆಲಸ ಮಾಡಲಿದ್ದೀರಿ. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಬೇಕಾಗುತ್ತದೆ.

ವೃಷಭ: ಅನಗತ್ಯ ಮಾತನಾಡಲು ಹೋದರೆ ಮನೆಯಲ್ಲಿ ಕಲಹ ಖಂಡಿತಾ. ತಾಳ್ಮೆ, ಸಂಯಮದಿಂದ ವರ್ತಿಸಿ. ಸಂಗಾತಿಗೆ ಉಡುಗೊರೆ ಕೊಡಲು ಮುಂದಾಗಲಿದ್ದೀರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆ.

ಮಿಥುನ: ದೈವಾನುಗ್ರಹದಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದೆ. ವೃತ್ತಿರಂಗದಲ್ಲಿ ಲವ ಲವಿಕೆಯಿಂದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಖರ್ಚು ವೆಚ್ಚಗಳು ಅಧಿಕವಾಗಿದ್ದರೂ ಕಾರ್ಯಸಾಧನೆಯಿಂದ ಮನಸ್ಸಿಗೆ ಸಂತಸವಾಗಲಿದೆ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ರಾಜಕೀಯ ರಂಗದಲ್ಲಿರುವವರಿಗೆ ನೆಮ್ಮದಿಯ ದಿನಗಳಿವು. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಗಳಿಸಲಿದ್ದೀರಿ. ಆರೋಗ್ಯದಲ್ಲಿ ಏರುಪೇರಾಗಬಹುದು. ಕಿರು ಓಡಾಟ ನಡೆಸಲಿದ್ದೀರಿ.

ಸಿಂಹ: ಚಿಂತಿತ ಕೆಲಸಗಳನ್ನು ಜಾರಿಗೆ ತರಲು ಇದು ಸಕಾಲವಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ನಿರೀಕ್ಷಿತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕನ್ಯಾ: ವಾಹನ, ಮನೆ ಖರೀದಿ ಸಾಲ ತೀರಿಸುವ ಚಿಂತೆ ಕಾಡಲಿದೆ. ಮನೆಯಲ್ಲಿ ಮಂಗಲ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಮನೆಗೆ ಅತಿಥಿಗಳ ಆಗಮನವಾಗಲಿದ್ದು, ಸಂತಸವಾಗಲಿದೆ.

ತುಲಾ: ಹಣಕಾಸಿನ ಪರಿಸ್ಥಿತಿ ಸುಧಾರಣೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಸ್ವಯಂ ವೃತ್ತಿಯವರಿಗೆ ಲಾಭವಾಗಲಿದೆ. ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕ: ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಬಂಧು ಬಳಗದವರ ಭೇಟಿಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ನೂತನ ದಂಪತಿಗಳಿಗೆ ಶೀಘ್ರ ಸಂತಾನ ಫಲವಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿರುವುದರಿಂದ ಚಿಂತೆ ಬೇಡ.

ಧನು: ಕೆಲಸಗಳಲ್ಲಿ ಅಡಚಣೆಗಳು ಕಂಡುಬಂದೀತು. ಅದಕ್ಕೆಲ್ಲಾ ಎದೆಗುಂದದೇ ಮುಂದುವರಿಯಿರಿ. ನೆರೆಹೊರೆಯವರೊಡನೆ ಅತಿಯಾದ ವಿಶ್ವಾಸವೂ ಒಳ್ಳೆಯದಲ್ಲ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ವಿರಾಮ ಸಿಗಲಿದೆ. ಪ್ರೀತಿ ಪಾತ್ರರ ಭೇಟಿಯಾಗಲಿದ್ದೀರಿ.

ಮಕರ: ಕಾರ್ಯರಂಗದಲ್ಲಿ ನಿಮ್ಮ ಕಾರ್ಯಸಾಧನೆಯಾಗಬೇಕಿದ್ದರೆ ಎಂಥಾ ತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ತವರಿನಿಂದ ಉಡುಗೊರೆ ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಿಗೆ ಸಿದ್ಧತೆ ನಡೆಸಲಿದ್ದೀರಿ.

ಕುಂಭ: ದಾಯಾದಿ ಕಲಹಗಳು ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರವಾಗಲಿದೆ. ವಿಶೇಷ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಚಿಂತೆಯಾಗಬಹುದು. ಎಷ್ಟೋ ದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಮನಸ್ಸಿಗೆ ಮುದ ನೀಡುವ ಘಟನೆಗಳು ನಡೆಯಲಿವೆ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನ ಸಂತಸ ನೀಡಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ಹಿರಿಯರು ವಾತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ