ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 27 ನವೆಂಬರ್ 2020 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಎಲ್ಲವೂ ನೀವಂದುಕೊಂಡಂತೆಯೇ ಕೆಲಸಗಳು ನಡೆದೀತು. ಆದರೆ ನೀವು ನಿರೀಕ್ಷಿಸಿದ ವ್ಯಕ್ತಿಯಿಂದ ನಿರಾಸೆ ಎದುರಿಸಬೇಕಾದೀತು. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಸಂಗಾತಿಯೊಂದಿಗೆ ಹೊಂದಿಕೊಂಡು ಬಾಳುವುದು ತುಂಬಾ ಮುಖ್ಯ. ಸಂಬಂಧಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಅತಿಯಾದ ಭರವಸೆ ಇರುವುದು. ವಿಶ್ವಾಸ ಉಳಿಸಿಕೊಳ್ಳಿ.

ಮಿಥುನ: ಯಾವುದೇ ವಿಚಾರವಾದರೂ ಆತುರದ ನಿರ್ಧಾರ ಕೈಗೊಳ್ಳಲು ಹೋದರೆ ಕೈ ಸುಟ್ಟುಕೊಳ್ಳಬೇಕಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಅಡ್ಡಿ ಆತಂಕಗಳು ಇದ್ದರೂ ಅಂತಿಮವಾಗಿ ಮುನ್ನಡೆ ಸಿಗಲಿದೆ. ಕಿರು ಓಡಾಟ ನಡೆಸುವಿರಿ.

ಕರ್ಕಟಕ: ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡುವುದರಿಂದ ನೆಮ್ಮದಿ ಸಿಗಲಿದೆ. ಬೇರೆಯವರ ಚಾಡಿಮಾತುಗಳಿಗೆ ಅನಗತ್ಯ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಸಿಂಹ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯಲು ಮನಸ್ಸು ಹಾತೊರೆಯಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡ ತಪ್ಪದು. ಹಾಗಿದ್ದರೂ ನಿಮ್ಮ ಏಳಿಗೆಯನ್ನು ತಡೆಯಲು ಯಾರಿಂದಲೂ ಸಾಧ‍್ಯವಾಗದು. ಚಿಂತೆ ಬೇಡ.

ಕನ್ಯಾ: ಹಣಕಾಸಿನ ಮುಗ್ಗಟ್ಟಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಸಂತಸದ ಸುದ್ದಿ ನಿರೀಕ್ಷಿಸಬಹುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ತುಲಾ: ಕಳೆದು ಹೋದ ವಸ್ತು, ಸಂಬಂಧ ಮರಳಿ ಪಡೆಯಲಾಗದು ಎಂಬುದನ್ನು ಮನಗಾಣಲಿದ್ದೀರಿ. ತಾಳ್ಮೆ, ಸಂಯಮದಿಂದ ವರ್ತಿಸುವುದು ಅಗತ್ಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆಉಂಟಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾದೀತು. ಹಣಕಾಸಿನ ಖರ್ಚು ವೆಚ್ಚಗಳಿಗೆ ಮಾನಸಿಕವಾಗಿ ಸಿದ್ಧರಾಗಿ. ಹಿಂದೆ ಮಾಡಿದ ಉತ್ತಮ ಕೆಲಸಗಳ ಫಲ ಇಂದು ಸಿಗಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಿ.

ಧನು: ನಿಮ್ಮ ಮಾತಿನಿಂದಲೇ ಇತರರ ಮನಸ್ಸಿಗೆ ನೋವುಂಟುಮಾಡಲಿದ್ದೀರಿ. ಹಿಂದೆ ಮಾಡಿದ ತಪ್ಪಿಗೆ ಇಂದು ಪಶ್ಚಾತ್ತಾಪ ಪಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ.

ಮಕರ: ಮಾನಸಿಕವಾಗಿ ನಿಮ್ಮ ಉತ್ಸಾಹಕ್ಕೆ ಭಂಗ ತರುವ ಘಟನೆಗಳಾದೀತು. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳಾಗುವುದದರಿಂದ ಚಿಂತೆಯಾಗಲಿದೆ. ಧನಾದಾಯಕ್ಕೆ ಹೊಸ ದಾರಿಗಳನ್ನು ಹುಡುಕಾಡಲಿದ್ದೀರಿ. ತಾಳ್ಮೆಯಿಂದಿರಿ.

ಕುಂಭ: ನಿಮ್ಮ ಯಶಸ್ಸಿಗೆ ಅಡ್ಡಗಾಲು ಹಾಕುವವರ ಬಗ್ಗೆ ಉಪೇಕ್ಷೆ ಬೇಡ. ಹೂಡಿಕೆ ವ್ಯವಹಾರಗಳನ್ನು ಮಾಡಲು ಕೆಲವು ದಿನ ಕಾಯುವುದು ಉತ್ತಮ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರವಾಗಿರಿ.

ಮೀನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಯೋಗ್ಯ ವಯಸ್ಕರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧ ಕೂಡಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ಮಾಡುವಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ