ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 7 ಜನವರಿ 2021 (09:07 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಎಲ್ಲವೂ ನೀವು ಅಂದುಕೊಂಡಂತೆಯೇ ನಡೆಯುವುದರಿಂದ ಕೆಲಸ ಕಾರ್ಯಗಳು ಸುಗಮವಾಗಲಿದೆ. ಆದರೆ ಭವಿಷ್ಯದ ಯೋಚನೆ ಚಿಂತೆಗೆ ಕಾರಣವಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಮನೆಯಲ್ಲಿ ಕೆಲವು ಬೇಸರದ ಘಟನೆಗಳು ನಡೆದು ಮನಸ್ಸಿನ ಶಾಂತಿ ನಷ್ಟವಾಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಶುಭ ಮಂಗಲ ಕಾರ್ಯಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡುವುದು ಉತ್ತಮ.

ಮಿಥುನ: ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ನಿಮ್ಮ ಛಲ ಫಲ ಕೊಡಲಿದೆ. ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬೆನ್ನ ಹಿಂದೆ ಪಿತೂರಿ ಮಾಡುವವರ ಸಂಚುಗಳು ಬಯಲಾಗಲಿವೆ. ನಿಮ್ಮ ವಾಕ್ಚಾತುರ್ಯದಿಂದ ಸಮಸ್ಯೆ ಪರಿಹರಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಕೊರತೆ ಉಂಟಾದೀತು.

ಸಿಂಹ: ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಸರಿಯಾಗಿ ಯೋಚಿಸಿ ಮುನ್ನಡೆಯಿರಿ. ಮನೆಗೆ ನೆಂಟರಿಷ್ಟರ ಆಗಮನವಾಗಲಿದೆ. ಆಧ್ಯಾತ್ಮದ ಒಲವು ಮೂಡಲಿದೆ. ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ಕನ್ಯಾ: ನೀವು ಬಯಸಿದ್ದು ಪಡೆಯಬೇಕಾದರೆ ಕಷ್ಟಪಡಲೇಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಹಳೆಯ ಸಮಸ್ಯೆಗಳು ಮತ್ತೆ ಎದುರಿಗೆ ಬರಲಿವೆ. ಗೃಹ ನಿರ್ಮಾಣಾದಿ ಕಾರ್ಯಗಳನ್ನು ಮುಂದೂಡಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಯೋಗವಿದೆ. ಶೀಘ್ರದಲ್ಲೇ ನೀವು ಅಂದುಕೊಂಡಿದ್ದ ಕೆಲಸ ಪೂರ್ತಿಯಾಗುವುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ನಾನಾ ರೀತಿಯ ಖರ್ಚು ವೆಚ್ಚ ಕಂಡುಬರಲಿದೆ.

ವೃಶ್ಚಿಕ: ಗೃಹ, ಕಟ್ಟಡ ನಿರ್ಮಾಣಾದಿ ಕಾರ್ಯಗಳಿಗೆ ಕೈ ಹಾಕಲು ಇದು ಸಕಾಲ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ. ಸ್ವಯಂ ವ್ಯಾಪಾರಿಗಳಿಗೆ ತಕ್ಕ ಮಟ್ಟಿಗೆ ಲಾಭ ಕಂಡುಬರಲಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.

ಧನು: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯೊಂದಿಗೆ ಅನವಶ್ಯಕ ಕಲಹಗಳನ್ನು ದೂರ ಮಾಡುವುದೇ ಉತ್ತಮ. ಬಂಧು ಮಿತ್ರರ ಭೇಟಿಯಾಗಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ಮಕರ: ಮಾನಸಿಕವಾಗಿ ಚಿತ್ತ ಚಾಂಚಲ್ಯದಿಂದಾಗಿ ನಿರ್ಧಾರ ಕೈಗೊಳ್ಳಲು ಕಷ್ಟವಾಗಬಹುದು. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ದೇಹಾರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರ ವಹಿಸಿ.

ಕುಂಭ: ಯಾರೋ ಮಾಡುವ ತಪ್ಪಿಗೆ ನೀವು ಹೊಣೆಗಾರರಾಗಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಸಹೋದ್ಯೋಗಿಗಳ ನೆರವು ಸಿಗಲಿದೆ. ಆರ್ಥಿಕವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಅನಗತ್ಯ ಮಾತುಗಳಿಂದ ಸಂಬಂಧ ಹಾಳಾದೀತು. ತಾಳ್ಮೆ, ಸಂಯಮವೇ ನಿಮಗೆ ಶ್ರೀರಕ್ಷೆಯಾಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ಪಡೆಯಲಿದ್ದೀರಿ. ರಾಜಕೀಯದಲ್ಲಿರುವವರಿಗೆ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ