ಮೇಷ: ನಿಮ್ಮ ಕೆಲಸಗಳಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ನಿವಾರಣೆಯಾಗಲಿವೆ. ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ಸಹಕಾರಿಯಾಗುವಂತ ಬೆಳವಣಿಗೆಗಳು ನಡೆಯಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ನಿಮ್ಮ ಬಹುದಿನಗಳ ಕನಸು ನನಸು ಮಾಡಿಕೊಳ್ಳುವ ಪ್ರಯತ್ನ ನಡೆಸಲಿದ್ದೀರಿ. ವೃತ್ತಿರಂಗದಲ್ಲಿ ಮುಂಬಡ್ತಿಯ ಯೋಗವಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.
ಕರ್ಕಟಕ: ಬಹುನಿರೀಕ್ಷಿತ ಕೆಲಸಗಳು ಸುಗಮವಾಗಿ ನಡೆದುಹೋಗಲಿವೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ನಿಮ್ಮ ಇಚ್ಛಾನುಸಾರ ನಿರ್ಧಾರ ತೆಗೆದುಕೊಳ್ಳಲು ಹೋಗಿ ಸಂಗಾತಿಯ ಅಸಮಾಧನಕ್ಕೆ ಗುರಿಯಾಗಲಿದ್ದೀರಿ.
ಸಿಂಹ: ಪ್ರೀತಿ ಪಾತ್ರರನ್ನು ಭೇಟಿಯಾಗುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಕೆಲಸ ಕಾರ್ಯದೊತ್ತಡದಿಂದ ವೈಯಕ್ತಿಕ ಖುಷಿ ಮರೆಯದಿರಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೊರಲು ಸಿದ್ಧರಾಗಬೇಕಾಗುತ್ತದೆ.
ಕನ್ಯಾ: ವ್ಯಾಪಾರೀ ವರ್ಗದವರಿಗೆ ಶತ್ರುಬಾಧೆ ಕಂಡುಬಂದೀತು. ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಸಂಗಾತಿಯ ದೇಹಾರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ. ಕಾರ್ಯನಿಮಿತ್ತ ಕಿರು ಓಡಾಟ ನಡೆಸುವಿರಿ.
ತುಲಾ: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸುವುದನ್ನು ಕಲಿಯಬೇಕು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ.
ವೃಶ್ಚಿಕ: ಮನಸ್ಸಿನಲ್ಲಿ ಕಾಡುವ ಅನಗತ್ಯ ಚಿಂತೆಗಳಿಗೆ ಬ್ರೇಕ್ ಹಾಕಿ ಕೆಲಸದ ಕಡೆಗೆ ಗಮನಕೊಡಿ. ಆರ್ಥಿಕವಾಗಿ ಅಭಿವೃದ್ಧಿಗೆ ಯೋಜನೆ ರೂಪಿಸಲಿದ್ದೀರಿ. ಸರಕಾರಿ ನೌಕರರಿಗೆ ಕಾರ್ಯದೊತ್ತಡದಿಂದ ಬಿಡುವು ಸಿಗಲಿದೆ. ತಾಳ್ಮೆ, ಸಂಯಮ ಅಗತ್ಯ.
ಧನು: ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ. ಕುಟುಂಬಸ್ಥರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಖರ್ಚು ವೆಚ್ಚದ ಬಗ್ಗೆ ಗಮನವಿರಲಿ.
ಮಕರ: ಬೇಡದ ಯೋಚನೆಗಳಿಂದ ಈ ಕ್ಷಣದ ಖುಷಿ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ಸಾಂಸಾರಿಕವಾಗಿ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಮಾತಿನ ಮೇಲೆ ನಿಗಾ ಇರಲಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.
ಕುಂಭ: ದಾಯಾದಿ ಕಲಹಗಳಿಂದ ಮುಕ್ತಿ ಪಡೆಯಲಿದ್ದೀರಿ. ಕುಟುಂಬಸ್ಥರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡುವಿರಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ.
ಮೀನ: ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವ ಸಣ್ಣ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾದೀತು. ಎಚ್ಚರಿಕೆಯಿಂದಿರಿ. ವಾಹನ ಖರೀದಿಸುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಪಡೆಯಲಿದ್ದೀರಿ. ಚಿಂತೆ ಬೇಡ.