ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 7 ಸೆಪ್ಟಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅತಿಯಾದ ಕೆಲಸದೊತ್ತಡದಿಂದ ತಾಳ್ಮೆ ಕಳೆದುಕೊಳ್ಳುವ ಸಂದರ್ಭ ಎದುರಾದೀತು. ಕ್ರಿಯಾತ್ಮಕವಾಗಿ ಯೋಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊ‍ಳ್ಳಿ. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವರ ಪ್ರಾರ್ಥನೆ ಮಾಡುವುದು ಉತ್ತಮ.

ವೃಷಭ: ವ್ಯಾಪಾರೀ ವರ್ಗದವರಿಗೆ ಹಿತ ಶತ್ರುಗಳ ಕಾಟ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ವೈಯಕ್ತಿಕ ವಿಚಾರಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಸಂಭಾವ್ಯ  ಸಮಸ್ಯೆಗಳು ತಪ್ಪಿ ಹೋಗಲಿವೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.

ಕರ್ಕಟಕ: ನೆರೆಹೊರೆಯವರು ನಿಮ್ಮ ಗುಟ್ಟು ತಿಳಿದುಕೊಳ್ಳಲು ಪ್ರಯತ್ನಿಸಲಿದ್ದೀರಿ. ಸಾಂಸಾರಿಕವಾಗಿ ನೆಮ್ಮದಿಯಿದ್ದರೂ ನಿಮ್ಮ ಜೀವನದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ತಾಳ್ಮೆಯಿರಲಿ.

ಸಿಂಹ: ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟದಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗವಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಚಿಂತೆ ಬೇಡ.

ಕನ್ಯಾ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಲಿದೆ. ನಿಮ್ಮ ಚತುರತೆಯಿಂದ ಮೇಲಧಿಕಾರಿಗಳ ಗಮನ ಸೆಳೆಯಲಿದ್ದೀರಿ. ವಾಹನಾದಿ ಸೌಕರ್ಯಗಳು ಸದ್ಯದಲ್ಲೇ ನಿಮ್ಮದಾಗಲಿದೆ.

ತುಲಾ: ಸಂಗಾತಿಯ ಬಹುದಿನಗಳ ಬೇಡಿಕೆ ಈಡೇರಿಸಲಿದ್ದೀರಿ. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಹೊಸದಾಗಿ ಹೂಡಿಕೆ ಮಾಡಲು ಇದು ಸಕಾಲ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಕಿರು ಓಡಾಟ ನಡೆಸಲಿದ್ದೀರಿ.

ವೃಶ್ಚಿಕ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಸಂಘರ್ಷಗಳಾದೀತು. ಎಚ್ಚರಿಕೆಯಿಂದಿರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದಾರೆ.

ಧನು: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೂಡಿಬರಲಿದೆ. ಬಹಳ ದಿನಗಳ ನಂತರ ಪ್ರೀತಿ ಪಾತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದಿರಿ.

ಮಕರ: ಹೊಸದಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ.

ಕುಂಭ: ಹಿಂದೆ ಆರಂಭಿಸಿದ್ದ ಪಾಲುದಾರಿಕೆ ವ್ಯವಹಾರಗಳು ಇಂದು ಫಲಗೂಡಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಮೀನ: ನಿರುದ್ಯೋಗಿಗಳ ಉದ್ಯೋಗ ಬೇಟೆಗೆ ಫಲ ಸಿಗಲಿದೆ. ಕಾರ್ಯನಿಮಿತ್ತ ಪರವೂರಿಗೆ ಸಂಚಾರ ಮಾಡಬೇಕಾಗಬಹುದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ