ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 12 ಸೆಪ್ಟಂಬರ್ 2021 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಬುದ್ಧಿವಂತಿಕೆಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಇಷ್ಟ ಭೋಜನ ಮಾಡುವ ಯೋಗ ಕೂಡಿಬರಲಿದೆ. ಗೃಹಿಣಿಯರಿಗೆ ಗೃಹಕೃತ್ಯಗಳಿಂದ ದೇಹ ಹೈರಾಣಾದೀತು. ಮಾತಿನ ಮೇಲೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ವಾಹನ, ಭೂಮಿ ಖರೀದಿ ವಿಚಾರದಲ್ಲಿ ಲಾಭವಾಗಲಿದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಮಾನ ವೃದ್ಧಿಗೆ ಯೋಜನೆ ರೂಪಿಸಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಹೊಸ ಜನರನ್ನು ಭೇಟಿಯಾಗುವ ಯೋಗ.

ಕರ್ಕಟಕ: ಗೃಹ ರಿಪೇರಿ, ಗೃಹ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಸಮಸ್ಯೆಗಳು ಬರುವ ಸಾಧ‍್ಯತೆ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ತಾಳ್ಮೆ, ಸಂಯಮ ಅಗತ್ಯ.

ಸಿಂಹ: ಕಾರ್ಯರಂಗದಲ್ಲಿ ನಿಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗ. ವಿವಾಹಾದಿ ಪ್ರಯತ್ನಗಳಿಗೆ ಜಯ ಸಿಗಲಿದೆ. ಅನಗತ್ಯ ಚಿಂತೆ ಬೇಡ.

ಕನ್ಯಾ: ನಿಮ್ಮ ಬೇಜವಾಬ್ಧಾರಿತನಕ್ಕೆ ತಕ್ಕ ಬೆಲೆ ತರುವ ಸಂದರ್ಭ ಎದುರಾದೀತು. ಅನಗತ್ಯವಾಗಿ ಸಂಗಾತಿಯೊಂದಿಗೆ ವಾದ ವಿವಾದ ಬೇಡ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ತುಲಾ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಒಳಿತಾಗುತ್ತದೆ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನ ಸಾಧ‍್ಯತೆ. ಹೊಸ ಹಣಕಾಸಿನ ವ್ಯವಹಾರಗಳು ಕೈಗೂಡಲಿವೆ. ಎಚ್ಚರಿಕೆ ಅಗತ್ಯ.

ವೃಶ್ಚಿಕ: ಭೂಮಿ, ಆಸ್ತಿ ವ್ಯವಹಾರಗಳಲ್ಲಿ ಮುನ್ನಡೆ ಸಿಗಲಿದೆ. ವ್ಯವಹಾರ ಸಂಬಂಧವಾಗಿ ದೂರ ಸಂಚಾರ ಮಾಡಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಘರ್ಷ ಬೇಡ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಧನು: ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಹಲವಾರು ಗೊಂದಲಗಳಿಗೆ ಉತ್ತರ ಪಡೆಯಲಿದ್ದೀರಿ. ಸಂಗಾತಿಯ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕಿರು ಓಡಾಟ ನಡೆಸಲಿದ್ದೀರಿ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಹೊಂದಾಣಿಕೆ ಅಗತ್ಯ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಗೆ ಅವಕಾಶ ಸಿಗಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಿ. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ಕೌಟುಂಬಿಕವಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ನಿಮ್ಮ ಕಾರ್ಯ ಸುಗಮವಾಗಲಿದೆ. ಉದ್ಯೋಗ ವ್ಯವಹಾರದಲ್ಲಿ ಮುನ್ನಡೆಯಿರಲಿದೆ.ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಮೀನ: ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಗುರುಹಿರಿಯರ ಆಶೀರ್ವಾದ ಪಡೆದರೆ ಉತ್ತಮ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ