ಮೇಷ: ಅನಿರೀಕ್ಷಿತವಾಗಿ ದೇಹಾರೋಗ್ಯದಲ್ಲಿ ಉಂಟಾಗುವ ಏರುಪೇರುಗಳು ತಲ್ಲಣವುಂಟು ಮಾಡೀತು. ಸಂಗಾತಿಯ ಸಹಕಾರವಿರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.
ವೃಷಭ: ದೂರದ ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳು. ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ಹೊಸ ಬದಲಾವಣೆಗೆ ಸಿದ್ಧರಾಗಿ. ತಾಳ್ಮೆ, ಸಂಯಮವಿರಲಿ.
ಮಿಥುನ: ಯಾವುದೇ ವಿಚಾರವಾದರೂ ಸರಿಯಾಗಿ ಪರಾಮರ್ಶಿಸಿ ಮುನ್ನಡೆಯುವುದು ಉತ್ತಮ. ಹಳೆಯ ಬಾಕಿ ಹಣ ತೀರಿಸಲು ಮುಂದಾಗಲಿದ್ದೀರಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.
ಕರ್ಕಟಕ: ನಿಮ್ಮ ದಾಕ್ಷಿಣ್ಯ ಪ್ರವೃತ್ತಿಯಿಂದಾಗಿ ಕೆಲವೊಂದು ಅವಕಾಶಗಳು ಕೈ ಜಾರಿ ಹೋದೀತು. ಸಂಗಾತಿಯ ಮುನಿಸಿಗೆ ಕಾರಣರಾಗಲಿದ್ದೀರಿ. ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಹಣಕಾಸಿನ ಖರ್ಚುವೆಚ್ಚಗಳಾದೀತು.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಬಂದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಸಾಂಸಾರಿಕವಾಗಿ ಸಮೃದ್ಧಿಯಿರಲಿದ್ದು, ಮಕ್ಕಳಿಂದ ಸಂತೋಷ ಸಿಗಲಿದೆ.
ಕನ್ಯಾ: ಔದ್ಯೋಗಿಕವಾಗಿ ನಿಮ್ಮ ಯಶಸ್ಸು ನಿಮ್ಮ ಕುಟುಂಬ ಸದಸ್ಯರಿಗೆ ಹೆಮ್ಮೆ ತಂದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಶುಭವಾಗಲಿದೆ.
ತುಲಾ: ನಿರುದ್ಯೋಗಿಗಳಿಗೆ ಪಾಲಿಗೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಭವಿಷ್ಯಕ್ಕಾಗಿ ಕೆಲವೊಂದು ಯೋಜನೆ ರೂಪಿಸಲಿದ್ದೀರಿ. ಸರಿಯಾದ ಸಮಯಕ್ಕೆ ಹಣಕಾಸಿನ ನೆರವು ಸಿಗಲಿದೆ.
ವೃಶ್ಚಿಕ: ವೃತ್ತಿರಂಗದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಸಂದಿಗ್ಧ ಪರಿಸ್ಥಿತಿಗಳು ಎದುರಾದೀತು. ಆಪ್ತರ ಸಲಹೆ ಪಡೆಯುವುದು ಉತ್ತಮ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಧನು: ಅನಿರೀಕ್ಷಿತವಾಗಿ ಬರುವ ನೆಂಟರಿಷ್ಟರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ಅಧಿಕಾರಿ ವರ್ಗದವರ ಪ್ರಶಂಸೆಗೊಳಗಾಗಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಮುನ್ನಡೆಯ ಯೋಗ. ಕೀರ್ತಿ ಸಂಪಾದಿಸಲದ್ದೀರಿ.
ಮಕರ: ದೇಹಾರೋಗ್ಯದಲ್ಲಿ ಏರುಪೇರಾಗಲಿದ್ದು, ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಲಿದೆ. ಆರ್ಥಿಕವಾಗಿ ಸಕಾಲದಲ್ಲಿ ನೆರವು ಸಿಗಲಿದೆ. ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ಕುಂಭ: ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿಗೆ ಅವಕಾಶಗಳು ಒದಗಿಬರಲಿವೆ. ನಿಮ್ಮ ತಾಳ್ಮೆ ಪರೀಕ್ಷೆ ನಡೆಯಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ಮೀನ: ದುಡುಕಿ ನಿರ್ಧಾರ ತೆಗೆದುಕೊಳ್ಳಲು ಹೋದರೆ ವೈಮನಸ್ಯಗಳಾದೀತು. ಸಾಮಾಜಿಕವಾಗಿ ಜಮನ್ನಣೆ ಪಡೆಯಲಿದ್ದೀರಿ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ವಾಗ್ವಾದಗಳಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.