ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 14 ಡಿಸೆಂಬರ್ 2021 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಳೆಯ ಮಿತ್ರರ ಸಮಾಗಮವಾಗಲಿದೆ. ಆಹಾರೋದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕಕರಿಂದ ಮೆಚ್ಚುಗೆ ಸಿಗುವುದು. ಬಾಕಿ ಹಣ ವಸೂಲಾತಿ ಚಿಂತೆ ಕಾಡೀತು. ಆದರೆ ಭರವಸೆ ಕಳೆದುಕೊಳ್ಳಬೇಡಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಸಹಾಯ ಒದಗಿಬರಲಿದೆ. ಸಹೋದರರೊಂದಿಗಿನ ಅಸಮಾಧಾನಗಳು ದೂರವಾಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಪ್ರಾರ್ಥನೆ ಮಾಡುವುದು ಉತ್ತಮ. ತಾಳ್ಮೆ, ಸಂಯಮವಿರಲಿ.

ಮಿಥುನ: ನೂತನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೊದಲು ಶನಿದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ. ಕಾರ್ಯರಂಗದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಕಾರ್ನಿಯಮಿತ್ತ ಕಿರು ಸಂಚಾರ ಮಾಡುವಿರಿ.

ಕರ್ಕಟಕ:  ವೈಚಾರಿಕವಾಗಿ ಯೋಚನೆ ಮಾಡಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಸಿಂಹ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ.

ಕನ್ಯಾ: ಹಳೆಯ ತಪ್ಪುಗಳನ್ನು ತಿದ್ದಿ ಯಶಸ್ಸು ಕಾಣಲಿದ್ದೀರಿ. ಮಕ್ಕಳಿಂದ ಸಂತೋಷ ಸಿಗಲಿದೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಉತ್ತಮ ಧನಾರ್ಜನೆಗೆ ಅವಕಾಶಗಳು ಸಿಗಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ತುಲಾ: ನಿಮ್ಮ ವಾಕ್ಚತುರತೆಯಿಂದ ಇತರರ ಗಮನ ಸೆಳೆಯಲಿದ್ದೀರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ಕಂಡುಬರುವುದು. ನಿಮ್ಮ ಕೆಲಸಗಳಿಗೆ ಕುಟುಂಬದವರ ಪ್ರೋತ್ಸಾಹ ಸಿಗಲಿದೆ. ಚಿಂತೆ ಬೇಡ.

ವೃಶ್ಚಿಕ: ಬಹುದಿನಗಳಿಂದ ಕಾಯುತ್ತಿದ್ದ ವ್ಯಕ್ತಿಗಳನ್ನು ಭೇಟಿಯಾಗುವ ಯೋಗ ಕೂಡಿಬರುವುದು. ಕಾರ್ಯನಿಮಿತ್ತ ಅನ್ಯ ಊರಿಗೆ ಪ್ರಯಾಣ ಮಾಡಲಿದ್ದೀರಿ. ವಾಹನ ಖರೀದಿ ಯೋಜನೆಗಳನ್ನು ಕೆಲವು ದಿನ ಮುಂದೂಡುವುದು ಉತ್ತಮ.

ಧನು: ಹೊಸ ಕೆಲಸಗಳಿಗೆ ಕೈ ಹಾಕಿದಾಗ ವಿಘ್ನಗಳು ಸಾಮಾನ್ಯ. ಕಾರ್ಯರಂಗದಲ್ಲಿ ಸಹೋದ್ಯೋಗಿಗಳ ನೆರವಿಗೆ ಧಾವಿಸಲಿದ್ದೀರಿ. ಕೌಟುಂಬಿಕವಾಗಿ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ವಿಶೇಷವಾದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದು, ನಿಮ್ಮ ಕೆಲಸಗಳು ಸರಾಗವಾಗಿ ನಡೆಯಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬಂದೀತು. ಸ್ವಯಂ ವ್ಯಾಪಾರಿಗಳು ಹಿತಶತ್ರುಗಳಿಂದ ದೂರವಿರುವುದು ಉತ್ತಮ.

ಕುಂಭ: ಹಿಂದೆ ಮಾಡಿದ್ದ ಹೂಡಿಕೆ ತಕ್ಕ ಫಲ ಪಡೆಯಲಿದ್ದೀರಿ. ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಉನ್ನತಿಯ ಯೋಗ. ಯೋಗ್ಯ  ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆತ್ಮವಿಶ್ವಾಸವಿರಲಿ.

ಮೀನ: ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಕುಟುಂಬದವರ ಜೊತೆ ಚರ್ಚಿಸಿ ಮುನ್ನಡೆಯಿರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾದೀತು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ