ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 15 ಫೆಬ್ರವರಿ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿರುದ್ಯೋಗಿಗಳು ತಕ್ಕ ಉದ್ಯೋಗಕ್ಕಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಸ್ನೇಹಿತರೆನಿಸಿಕೊಂಡಿದ್ದವರಿಂದ ನಿರಾಸೆಯಾಗುವ ಪರಿಸ್ಥಿತಿ ಬಂದೀತು. ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.

ವೃಷಭ: ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದ್ದು, ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ. ವಿಶೇಷವಾದ ವ್ಯಕ್ತಿಗಳಿಂದ ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ.

ಮಿಥುನ: ಸಹೋದರಾದಿ ಸಂಬಂಧಿಗಳೊಂದಿಗೆ ಹಳೆಯ ವೈಷಮ್ಯ ಮರೆತು ಸಂತೋಷ ಕಾಣಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಕ್ರಿಯಾತ್ಮಕ ಕೆಲಸಗಳಿಗೆ ತಕ್ಕ ಮನ್ನಣೆ ಸಿಗಲಿದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ಸೂಕ್ತ ಸಂಗಾತಿಗಾಗಿ ಹುಡುಕಾಟ ನಡೆಸಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮರೆಯದಿರಿ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ ಕಂಡುಬರಲಿದೆ. ವೈಯಕ್ತಿಕ ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಹೊಸ ಮಿತ್ರರನ್ನು ಸಂಪಾದಿಸುವಿರಿ. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ.

ಕನ್ಯಾ: ನೀವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಂತೋಷ ಸಿಗುವುದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚಾದೀತು. ಸಂಗಾತಿಯ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ತುಲಾ: ಮನಸ್ಸಿನ ಮಾತಿನಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ಬಂದೀತು. ದಾಂಪತ್ಯದಲ್ಲಿ ನೆಮ್ಮದಿ ಕಂಡುಬರಲಿದೆ. ತಾಳ್ಮೆಯಿರಲಿ.

ವೃಶ್ಚಿಕ: ನಿಮ್ಮ ಬಗ್ಗೆ ಇನ್ನೊಬ್ಬರು ಹೇಳುವ ಅತಿಯಾದ ಅಭಿಪ್ರಾಯಗಳಿಗೆ ತಲೆಕೆಡಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನೆರೆಹೊರೆಯವರ ಕಷ್ಟಕ್ಕೆ ಆಗಿಬರಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ಧನು: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಯನ್ನು ಸಹಿಸದೇ ಕಿರುಕುಳ ಕೊಡುವವರಿರುತ್ತಾರೆ. ಹಿತಶತ್ರುಗಳಿಂದ ದೂರವಿದ್ದರೇ ಉತ್ತಮ. ಸಂಗಾತಿಯ ಮಾತುಗಳಿಗೆ ಕಿವಿಗೊಡಬೇಕಾಗುತ್ತದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುವುದು.

ಮಕರ: ಬಹುದಿನಗಳಿಂದ ಖರೀದಿ ಮಾಡಬೇಕೆಂದಿದ್ದ ವಸ್ತುಗಳನ್ನು ಖರೀದಿಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ಹೊಸದಾಗಿ ವೃತ್ತಿ ಜೀವನ ಆರಂಭಿಸಿದ್ದರೆ ಸವಾಲುಗಳು ಸಾಮಾನ್ಯ. ಆತ್ಮವಿಶ್ವಾಸ ಬೆಳೆಸುವ ಪ್ರಯತ್ನ ಮಾಡಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.

ಮೀನ: ವ್ಯಾಪಾರ, ವ್ಯವಹಾರದಲ್ಲಿ ಏಳಿಗೆಯಿದ್ದರೂ ಅಂದುಕೊಂಡಷ್ಟು ಲಾಭ ಬರದೇ ನಿರಾಸೆಯಾದೀತು. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ