ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 9 ಮಾರ್ಚ್ 2022 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಯಾವುದೇ ವಿಚಾರವಾದರೂ ಸುಲಭವಾಗಿ ಒಪ್ಪಿಕೊಳ್ಳುವ ಪ್ರವೃತ್ತಿ ನಿಮ್ಮದಲ್ಲ. ಹೀಗಾಗಿ ಬೇರೆಯವರಿಗೆ ಇದರಿಂದ ಅಸಮಾಧಾನಗಳುಂಟಾಗಬಹುದು. ಮನೆಗೆ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆ ಅಗತ್ಯ.

ವೃಷಭ: ಸಂಗಾತಿಯ ಕೆಲವೊಂದು ಮಾತುಗಳು ನಿಮಗೆ ಅಪಥ್ಯವೆನಿಸೀತು. ಆದರೆ ಭವಿಷ್ಯದ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಂಭವ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಮನೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಯಾಗಲಿದೆ. ಸಾಂಸಾರಿಕವಾಗಿ ತಾಳ್ಮೆ, ಹೊಂದಾಣಿಕೆಯಿರಲಿ. ವೃತ್ತಿರಂಗದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಇಷ್ಟಭೋಜನ ಪ್ರಾಪ್ತಿಯಾಗುವುದು.

ಸಿಂಹ: ರಾಜಕೀಯವಾಗಿ ನಿಮ್ಮ ಏಳಿಗೆ ಸಹಿಸದವರು ಪಿತೂರಿ ನಡೆಸಿಯಾರು. ಯಾವುದೇ ವಿಚಾರವಾದರೂ ಸರಿಯಾಗಿ ಪರಾಮರ್ಶಿಸಿ ಮುನ್ನಡೆಯುವುದು ಉತ್ತಮ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.

ಕನ್ಯಾ: ಇಷ್ಟು ದಿನ ನೀವು ಕಾಯುತ್ತಿದ್ದ ಅವಕಾಶ ಇಂದು ಒದಗಿಬರಲಿದ್ದು, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ತುಲಾ: ನಿಮ್ಮ ಆಶಾವಾದಿ ಮನೋಭಾವವೇ ನಿಮಗೆ ಶ್ರೀರಕ್ಷೆಯಾಗಲಿದೆ. ವಿಪರೀತ ಕೆಲಸದೊತ್ತಡದಿಂದ ತಾಳ್ಮೆ ಕಳೆದುಕೊಳ್ಳುವ ಸಂಧರ್ಭಗಳು ಎದುರಾದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ತಾಳ್ಮೆಯಿರಲಿ.

ವೃಶ್ಚಿಕ: ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಪ್ರಸಂಗಗಳು ಎದುರಾದೀತು. ಎಚ್ಚರಿಕೆ ಅಗತ್ಯ. ಕಟ್ಟಡ ಕಾಮಗಾರಿ ಕೆಲಸಕ್ಕೆ ಕೈ ಹಾಕಿದ್ದರೆ ಅಡೆತಡೆಗಳು ಬಂದೀತು. ದೇವತಾ ಪ್ರಾರ್ಥನೆ ಮಾಡಿ.

ಧನು: ಕೋರ್ಟು ಕಚೇರಿ ಕೆಲಸಗಳಿಗಾಗಿ ಸಿದ್ಧತೆ ನಡೆಸಲಿದ್ದೀರಿ. ಗುರುಹಿರಿಯರ ಸಲಹೆ ಸೂಚನೆಗಳು ಉಪಯೋಗಕ್ಕೆ ಬರಲಿವೆ. ಕೌಟುಂಬಿಕವಾಗಿ ಪರಸ್ಪರ ಚರ್ಚಿಸಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ಚಿಂತೆ ಬೇಡ.

ಮಕರ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುವುದು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದ್ದು, ಹೊಸ ಯೋಜನೆಗಳಿಗೆ ಕೈಹಾಕಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಚಾರವನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಗೃಹಿಣಿಯರಿಗೆ ಕೆಲಸದೊತ್ತಡ ಹೆಚ್ಚಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಮೀನ: ಮಹಿಳೆಯರಿಗೆ ಶುಭ ಮಂಗಲ ಕಾರ್ಯಗಳಿಗಾಗಿ ಸಿದ್ಧತೆ ನಡೆಸುವ ಜವಾಬ್ಧಾರಿಯಿರಲಿದೆ. ಹಣಕಾಸಿನ ಅಚಡಣೆಗಳು ದೂರವಾಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕುಲದೇವರ ಪ್ರಾರ್ಥನೆ ಮಾಡಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ