ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 16 ಏಪ್ರಿಲ್ 2022 (06:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯಲು ಪ್ರಯತ್ನ ನಡೆಸಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರುವುದು.

ವೃಷಭ: ಯಾವುದೇ ಕೆಲಸಕ್ಕೆ ಮುನ್ನ ಕುಲದೇವರ ಪ್ರಾರ್ಥನೆಯೊಂದಿಗೆ ಆರಂಭಿಸಿದರೆ ಉತ್ತಮ. ಹೊಸದಾಗಿ ಪರಿಚಯವಾದ ವ್ಯಕ್ತಿಗಳಿಂದ ನಿಮಗೆ ಉಪಕಾರವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರಲಿದೆ.

ಮಿಥುನ: ಪ್ರೇಮಿಗಳು ಸಂಗಾತಿಯ ಬಳಿ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ನಿರುದ್ಯೋಗಿಗಳ ಬಹಳ ದಿನಗಳ ಚಿಂತೆ ನಿವಾರಣೆಯಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗುವುದು. ಇಷ್ಟಮಿತ್ರರ ಭೇಟಿಯಾಗುವಿರಿ.

ಕರ್ಕಟಕ: ದೂರದ ವ್ಯವಹಾರಗಳಿಂದ ಲಾಭವಾದೀತು. ಭವಿಷ್ಯದ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಆದಾಯದಲ್ಲಿ ವೃದ್ಧಿಯಾಗಲಿದ್ದು, ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ.

ಸಿಂಹ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ಯಾವುದೇ ತೊಡಕಾಗದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಕೌಟುಂಬಿಕವಾಗಿ ಸುಖ ಸಮೃದ್ಧಿಯಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಅಂದುಕೊಂಡಿದ್ದು ನೆರವೇರಿದರೂ ನಿಮ್ಮ ನಿರ್ಧಾರಗಳ ಬಗ್ಗೆ ಆಪ್ತರಿಗೆ ಅಸಮಾಧಾನ ಕಂಡುಬಂದೀತು. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ಕೊಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ತುಲಾ: ನಿಮ್ಮ ನಡೆ ನುಡಿಗಳಿಂದ ಇತರರ ಮನ ಗೆಲ್ಲಲಿದ್ದೀರಿ. ವ್ಯಾವಹಾರಿಕವಾಗಿ ಮುನ್ನಡೆಯಿದ್ದರೂ ಹಿತಶತ್ರುಗಳ ಕಾಟ ಕಂಡುಬಂದೀತು. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಎಚ್ಚರಿಕೆ ಅಗತ್ಯ.

ವೃಶ್ಚಿಕ: ಮನಸ್ಸಿನಲ್ಲಿರುವುದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ವೈಯಕ್ತಿಕ ವಿಚಾರಗಳಲ್ಲಿ ಮೂರನೆಯವರ ಪ್ರವೇಶಕ್ಕೆ ಅವಕಾಶ ಮಾಡಿಕೊಡದಿರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚಾಗಲಿದೆ.

ಧನು: ನಿಮ್ಮ ಮಾತಿನಿಂದ ಇತರರಿಗೆ ನೋವಾಗದಂತೆ ನಡೆದುಕೊಳ್ಳಿ. ಇಷ್ಟಭೋಜನ ಮಾಡುವ ಯೋಗವಿದ್ದು, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಬಹಳ ದಿನಗಳ ನಂತರ ಬಂಧು ಮಿತ್ರರ ಭೇಟಿಯಾಗಲಿದ್ದೀರಿ. ತಾಳ್ಮೆ ಅಗತ್ಯ.

ಮಕರ: ಬಯಸಿದ್ದು ನಿಮ್ಮ ಕೈಗೆಟುಕುವ ಕಾಲವಿದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶೆ ನಡೆಸಿ. ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳು ಮೂಡದಂತೆ ಎಚ್ಚರಿಕೆ ವಹಿಸಿ.

ಕುಂಭ: ಮಕ್ಕಳಿಂದ ಸಂತೋಷ ಸಿಗಲಿದ್ದು, ಬಂಧು ಮಿತ್ರರ ಆದರಗಳಿಗೆ ಪಾತ್ರರಾಗಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮೀನ: ನಿಮ್ಮ ಹಠಮಾರೀ ಮನೋಭಾವ ಇತರರಿಗೆ ಕಿರಿ ಕಿರಿಯಾದೀತು. ಮಕ್ಕಳ ದೇಹಾರೋಗ್ಯದ ವಿಚಾರದಲ್ಲಿ ಉಪೇಕ್ಷೆ ಬೇಡ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದೇವರ ಪ್ರಾರ್ಥನೆ ಮಾಡಿದರೆ ಶುಭ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ