ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 22 ಏಪ್ರಿಲ್ 2022 (08:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗವಿದೆ. ಹಾಗಿದ್ದರೂ ಮಾನಸಿಕವಾಗಿ ಕೆಲವೊಂದು ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕುಗ್ಗಿಸೀತು. ಆಪ್ತರೊಂದಿಗೆ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ. ದೇವರ ಪ್ರಾರ್ಥನೆ ಮಾಡಿ.

ವೃಷಭ: ಒಳ್ಳೆಯ ಕೆಲಸಕ್ಕೆ ಮೊದಲು ಹಲವು ಅಡೆತಡೆಗಳು ತೋರಿಬಂದೀತು. ಅದೆಲ್ಲವನ್ನೂ ಮೀರಿ ನಡೆಯಬೇಕಾದ ಅನಿವಾರ್ಯತೆಯಿದೆ. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಉತ್ತಮ.

ಮಿಥುನ: ಉದ್ಯೋಗ ಬದಲಾವಣೆಗೆ ಪ್ರಯತ್ನಿಸಲಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ. ಕಿರು ಸಂಚಾರ ಮಾಡುವಿರಿ.

ಕರ್ಕಟಕ: ವಿಶೇಷವಾದ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಹೊಸ ತಿರುವು ನೀಡಲಿದ್ದಾರೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಕೊಂಚ ಹಿನ್ನಡೆಯಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ವೃತ್ತಿರಂಗದಲ್ಲಿ ಹೆಚ್ಚಿನ ಅನುಕೂಲಕ್ಕಾಗಿ ಕಠಿಣ ಪ್ರಯತ್ನ ನಡೆಸಬೇಕಾಗುತ್ತದೆ. ವ್ಯವಹಾರದಲ್ಲಿ ಮುನ್ನಡೆಯಿದ್ದರೂ ಹಿತಶತ್ರುಗಳ ಕಾಟ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೀತು. ಚಿಂತೆ ಬೇಡ.

ಕನ್ಯಾ: ಕೌಟುಂಬಿಕವಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯತೆ ಇತರರ ಗಮನಕ್ಕೆ ಬರಲಿದೆ. ಕೈಗೊಂಡ ಕೆಲಸಗಳಲ್ಲಿ ಜಯ ಸಿಗಲಿದೆ.

ತುಲಾ: ಕಾರ್ಯಸಿದ್ಧಿಗಾಗಿ ಕುಲದೇವರ ಪ್ರಾರ್ಥನೆ ನಡೆಸಿ ದಿನದಾರಂಭ ಮಾಡಿ. ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ಹೊಸ ವ್ಯಾಪಾರ ಆರಂಭಿಸಲು ಸಕಾಲ.

ವೃಶ್ಚಿಕ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಮನಸ್ಸಿಗೆ ಸಂತೋಷವಾಗಲಿದೆ.

ಧನು: ಕೆಲಸ ಕಾರ್ಯಗಳಲ್ಲಿ ಆರಂಭದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡರೂ ಬಳಿಕ ಚಿಂತೆಗಳು ಕಾಡೀತು. ಅನಗತ್ಯವಾಗಿ ಮಾತನಾಡಲು ಹೋಗಿ ಬೇರೆಯವರ ಮನಸ್ಸಿಗೆ ನೋಯಿಸಬೇಡಿ. ತಾಳ್ಮೆಯಿರಲಿ.

ಮಕರ: ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಸವಾಲುಗಳು ಎದುರಾದೀತು. ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ.

ಕುಂಭ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ಮೀನ: ಬಹಳ ದಿನಗಳಿಂದ ಅಂದುಕೊಂಡಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಯತ್ನಿಸಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಮಹಿಳೆಯರಿಗೆ ಉನ್ನತಿಯ ಯೋಗ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ