ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 28 ಜೂನ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆ ಕಂಡುಬರಲಿದೆ. ವೈಯಕ್ತಿಕ ದೇಹಾರೋಗ್ಯದ ಕಡೆಗೆ ಗಮನವಿರಲಿ. ಸಂಗಾತಿಯ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಉತ್ತಮ. ದಿನದಂತ್ಯಕ್ಕೆ ಶುಭ ಸುದ್ದಿ ಆಲಿಸುವಿರಿ.

ವೃಷಭ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಸಕಾಲ. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ. ಮಹಿಳೆಯರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ತಾಳ್ಮೆಯಿರಲಿ.

ಮಿಥುನ: ವೃತ್ತಿರಂಗದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ.

ಕರ್ಕಟಕ: ನಿಮ್ಮ ಬದುಕಿನಲ್ಲಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಹೊಸ ತಿರುವಿಗೆ ಕಾರಣವಾಗಲಿದೆ. ಗುರುಹಿರಿಯರೊಂದಿಗೆ ಅನಗತ್ಯ ವಾದ ಬೇಡ. ತಾಂತ್ರಿಕ ವೃತ್ತಿಯವರಿಗೆ ಮುಂಬಡ್ತಿಯ ಯೋಗವಿದೆ.

ಸಿಂಹ: ಮನೆಯ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಆಪ್ತರೊಂದಿಗೆ ಪರಾಮರ್ಶೆ ನಡೆಸಿದರೆ ಉತ್ತಮ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇಟ್ಟುಕೊಳ್ಳಿ.

ಕನ್ಯಾ: ಮನೆಯಲ್ಲಿ ಸಣ್ಣ ಪುಟ್ಟ ಸಂಘರ್ಷಗಳಾದೀತು. ತಾಳ್ಮೆ, ಸಂಯಮದಿಂದ ವ್ಯವಹರಿಸಿ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಪ್ರೀತಿ ಪಾತ್ರರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಬಯಸಿದ್ದನ್ನು ಪಡೆಯಲು ಹೋರಾಟವೇ ಮಾಡಬೇಕಾಗಿ ಬಂದೀತು. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಮನೆಯಲ್ಲಿ ಧಾರ್ಮಿಕ ಕಾರ್ಯ ನೆರವೇರಿಸಲು ತಯಾರಿ ನಡೆಸಲಿದ್ದೀರಿ.

ವೃಶ್ಚಿಕ: ವಸ್ತು ಸ್ಥಿತಿ ಅರಿತು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸಂಗಾತಿಯೊಂದಿಗೆ ಅನಗತ್ಯ ವಾದ-ವಿವಾದ ಬೇಡ. ಬೇರೆಯವರ ವೈಯಕ್ತಿಕ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸಲು ಹೋಗಬೇಡಿ. ದುಂದು ವೆಚ್ಚ ಬೇಡ.

ಧನು: ನಿಮಗೆ ಅತ್ಯಂತ ಪ್ರಿಯವಾದ ವಸ್ತು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಮನಸ್ಸಿನಲ್ಲಿರುವ ವಿಚಾರಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದೀರಿ. ಬಂಧು ಮಿತ್ರರ ಭೇಟಿ ಸಾಧ‍್ಯತೆ. ಕಿರು ಪ್ರಯಾಣ ಮಾಡುವಿರಿ.

ಮಕರ: ಹಲವು ದಿನಗಳ ನಂತರ ಪ್ರೀತಿ ಪಾತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗುವುದು. ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಕುಂಭ: ಕೆಲಸ ಕಾರ್ಯಗಳ ನಿಮಿತ್ತ ದೂರ ಪ್ರಯಾಣ ಮಾಡುವ ಅನಿವಾರ್ಯತೆ ಎದುರಾದೀತು. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅವಿವಾಹಿತ ಕನ್ಯೆಯರಿಗೆ ಶುಭ ಫಲಗಳು ದೊರೆಯಲಿವೆ.

ಮೀನ: ಕೆಲಸದಲ್ಲಿ ನಿಮ್ಮ ತಲ್ಲೀನತೆ, ಆಸಕ್ತಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಲಿದೆ. ಗೃಹ, ಆಸ್ತಿ ಖರೀದಿ ವಿಚಾರದಲ್ಲಿ ಆಸಕ್ತಿ ಕಂಡುಬರಲಿದೆ. ದಾಂಪತ್ಯದಲ್ಲಿ ಮಧ್ಯಮ ಸುಖ ಕಂಡುಬರುವುದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ