ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದರೆ ಎಂಥಾ ಶಾಪ ತಟ್ಟುತ್ತದೆ ಗೊತ್ತಾ?!
ಶನಿವಾರ, 25 ಜೂನ್ 2022 (09:10 IST)
ಬೆಂಗಳೂರು: ಮಹಿಳೆಯರನ್ನು ದೇವತೆ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಹಾಗಿದ್ದಾಗ ಮಹಿಳೆಯರಿಗೆ ಅಪಮಾನ ಮಾಡುವುದು, ವಂಚಿಸಿದರೆ ಅದಕ್ಕೆ ತಗುಲುವ ಶಾಪ ಎಂಥದ್ದು ಗೊತ್ತಾ? ಈ ಲೇಖನ ಓದಿ.
ಸ್ತ್ರೀಯರಿಗೆ ಆಭರಣ, ಹಣದ ವಂಚನೆ ಮಾಡುವುದು, ಮದುವೆಯಾಗುವುದಾಗಿ ಮಾತು ಕೊಟ್ಟು ವಂಚಿಸುವುದು, ಸ್ತ್ರೀಯರಿಗೆ ನಿಂದಿಸಿ ಆಕೆಯ ಕಣ್ಣೀರಿಗೆ ಕಾರಣವಾಗುವುದು, ಇತ್ಯಾದಿ ಸ್ತ್ರೀ ಶಾಪಕ್ಕೆ ಕಾರಣವಾಗುತ್ತದೆ.
ಇದರಿಂದ ಸದಾ ಅನಾರೋಗ್ಯ, ಕಷ್ಟದ ಜೀವನ, ಹಣಕಾಸು, ಭೂಮಿ ವಿಚಾರದಲ್ಲಿ ತೊಂದರೆ, ವಿವಾಹಕ್ಕೆ ವಿಘ್ನಗಳು, ಅಪಘಾತಗಳಾಗುವ ಭಯ ಇತ್ಯಾದಿ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವಾಗಲೂ ಸ್ತ್ರೀಯರನ್ನು ಗೌರವದಿಂದ ನಡೆಸಿಕೊಳ್ಳಿ.