ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 13 ನವೆಂಬರ್ 2022 (08:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಇನ್ನೊಬ್ಬರಿಗೆ ಕೇಡು ಬಯಸಿದರೆ ಅದುವೇ ನಿಮಗೆ ತಿರುಗುಬಾಣವಾಗಲಿದೆ. ಹಣಕಾಸಿನ  ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ಧಾರಿಗೆ ಹೆಗಲಿಗೇರಲಿದೆ. ಹಣಕಾಸಿನ ವಿಚಾರದಲ್ಲಿ ಆಪ್ತರೊಂದಿಗೆ ಸಂಘರ್ಷಗಳಾಗುವ ಸಾಧ‍್ಯತೆ. ಮಾತಿನ ಮೇಲೆ ನಿಗಾ ಇರಲಿ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ದೂರದ ವ್ಯವಹಾರಗಳಿಂದ ಲಾಭ ಕಂಡುಬರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ಹಿರಿಯರಿಗೆ ದೇಹಾರೋಗ್ಯದಲ್ಲಿ ಕೊಂಚ ಏರುಪೇರಾದೀತು. ಆತಂಕ ಬೇಡ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕರ್ಕಟಕ: ಸಾಂಸಾರಿಕವಾಗಿ ಅನುರಾಗ ವೃದ್ಧಿಯಾಗಲಿದೆ. ಪಾಲುದಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡುಬರುವುದು. ಹೊಸದಾಗಿ ಆರಂಭಿಸಿದ್ದ ಕೆಲಸಗಳಿಗೆ ವಿಘ‍್ನಗಳು ತೋರಿಬಂದೀತು. ಕುಲದೇವರ ಪ್ರಾರ್ಥನೆ ಮಾಡಿ.

ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಆದರೆ ಕೌಟುಂಬಿಕವಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವುದು ಮುಖ್ಯ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಅನಗತ್ಯ ಚಿಂತೆ ಬೇಡ.

ಕನ್ಯಾ: ಬಹಳ ದಿನಗಳ ನಂತರ ಬಂಧು ಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಸವಿಯುವ ಅವಕಾಶ. ಮಕ್ಕಳ ದೇಹಾರೋಗ್ಯದ ಕಡೆಗೆ ಗಮನವಿರಲಿ. ದುಂದು ವೆಚ್ಚ ಬೇಡ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂಬ ಬೇಸರ ಕಾಡೀತು. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಂಡುಬಂದೀತು. ತಾಳ್ಮೆಯಿರಲಿ.

ವೃಶ್ಚಿಕ: ಮನೆಯಲ್ಲಿ ಸಂತೋಷದಾಯಕ ವಾತಾವರಣವಿರಲಿದೆ. ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನ ಸಾಧ‍್ಯತೆ. ಆದರೆ ಹಣಕಾಸಿನ ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ. ವಿಶೇಷ ಸಂಪತ್ತು, ಸೌಕರ್ಯ ನಿಮ್ಮದಾಗಲಿದೆ.

ಧನು: ಮನೆಯಲ್ಲಿ ಕೆಲಸದೊತ್ತಡದಿಂದಾಗಿ ದೇಹಾಯಾಸವಾಗುವ ಸಾಧ್ಯತೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಭೂಮ್ಯಾದಿ ವ್ಯವಹಾರಗಳಲ್ಲಿ ಅಧಿಕ ಲಾಭ ಕಂಡುಬರುವುದು. ವಿವೇಚನೆಯಿಂದ ನಿರ್ಧಾರ ಮಾಡಿ.

ಮಕರ: ಹಿರಿಯರಿಗೆ ದೇವತಾ ಸ್ಥಳಗಳನ್ನು ಸಂದರ್ಶಿಸುವ ಯೋಗ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಮಹಿಳೆಯರಿಗೆ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು.

ಕುಂಭ: ನಿಮ್ಮ ಬಿಡುವಿನ ವೇಳೆಯ ಸದುಪಯೋಗ ಮಾಡಲು ಪ್ರಯತ್ನಿಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಬಂದೀತು.

ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅನಿರೀಕ್ಷಿತ ಉಡುಗೊರೆಗಳು ಸಂತೋಷ ಕೊಡಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ