ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 23 ನವೆಂಬರ್ 2022 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನೀವು ಬಹಳ ಕಷ್ಟವೆಂದು ತಿಳಿದಿದ್ದ ಕೆಲಸ ಸುಗಮವಾಗಿ ನೆರವೇರಲಿದೆ. ಅನ್ಯರ ಮಾತಿಗೆ ಕಿವಿಗೊಟ್ಟು ಆತ್ಮೀಯರೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಹಣಕಾಸಿನ ಹರಿವಿಗೆ ತೊಂದರೆಯಾಗದು.

ವೃಷಭ: ಉದ್ಯೋಗ ಬದಲಾವಣೆ ಪ್ರಯತ್ನ ಮುಂದುವರಿಸಬೇಕಾಗುತ್ತದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ವಿದ್ಯಾರ್ಥಿಗಳಿಗೆ ಮುನ್ನಡೆ.

ಮಿಥುನ: ಹಿತ ಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಎದುರಾದೀತು. ಮಾತೃ ಸಮಾನರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಯಾದೀತು. ಕುಲದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಅಷ್ಟೇ ಖರ್ಚೂ ಇರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಲ್ಯಾಣ ಪ್ರಾಪ್ತಿಯಾಗಲಿದೆ.

ಸಿಂಹ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಸಲಿದ್ದೀರಿ. ಹೊಸದಾಗಿ ಆರಂಭಿಸಿದ್ದ ಉದ್ಯಮ ಕೈ ಹಿಡಿಯಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ತಾಳ್ಮೆಯಿರಲಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನೀವೇ ರಾಜನಾಗಿ ಮೆರೆಯಲಿದ್ದೀರಿ. ಸಾಂಸಾರಿಕವಾಗಿ ಅಡೆತಡೆಗಳು ಎದುರಾದೀತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ಉನ್ನತ ಸ್ಥಾನದಲ್ಲಿರುವವರಿಗೆ ಕಾರ್ಯದೊತ್ತಡ ಹೆಚ್ಚಾದೀತು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಹಿಂದೆ ನಿಮ್ಮಿಂದ ಸಹಾಯ ಪಡೆದವರಿಂದ ಪ್ರತ್ಯುಪಕಾರ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಶ್ಚಿಕ: ಯಶಸ್ಸಿನ ಕಡೆಗೆ ಗಮನ ಕೊಡುವಾಗ ಸಂಬಂಧಗಳ ಬಗ್ಗೆ ಅವಗಣನೆ ಬೇಡ. ಮಾತಿನ ಮೇಲೆ ನಿಗಾ ಇರಲಿ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಧನು: ಹೊಸದಾಗಿ ಆರಂಭಿಸಿದ್ದ ಕೆಲಸಗಳಲ್ಲಿ ಮುನ್ನಡೆ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯೊಂದಿಗೆ ಪರಾಮರ್ಶಿಸುವುದು ಉತ್ತಮ.

ಮಕರ: ನೆರೆಹೊರೆಯವರಿಗೆ ನಿಮ್ಮಿಂದ ತೊಂದರೆಗಳು ಎದುರಾದೀತು. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಇತರರ ಮೇಲೆ ಅತಿಯಾಗಿ ಅವಲಂಬನೆ ಬೇಡ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

ಕುಂಭ: ಮನೆ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಗಮನವಿರಲಿ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಪಡೆಯಲಿದ್ದೀರಿ. ಮನೆಯಲ್ಲಿ ನಿಮ್ಮ ನಿರ್ಧಾರಕ್ಕೆ ಹೆಚ್ಚಿನ ಬೆಲೆ ಸಿಗಲಿದೆ.

ಮೀನ: ಎಷ್ಟೇ ಕಷ್ಟಗಳಿದ್ದರೂ ಕೆಲಸ ಕಾರ್ಯಗಳಲ್ಲಿ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಡುವಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ