ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 28 ಡಿಸೆಂಬರ್ 2022 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮಾತೃಸಮಾನರಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಆದರೆ ಸಾಂಸಾರಿಕವಾಗಿ ನೀವು ಆಡುವ ಮಾತಿನಿಂದ ನೋವಾಗಬಹುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.  ತಾಳ್ಮೆಯಿರಲಿ.

ವೃಷಭ: ಆಸ್ತಿ ಖರೀದಿ ವ್ಯವಹಾರದಲ್ಲಿ ವಂಚನೆಗೊಳಗಾಗುವ ಭೀತಿ. ಹಿರಿಯರ ಸಲಹೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಉದ್ದೇಶಿತ ಕೆಲಸ ಪೂರ್ಣಗೊಂಡ ನೆಮ್ಮದಿಯಿರಲಿದೆ. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಕರ್ಕಟಕ: ಕಾರ್ಯನಿಮಿತ್ತ ಪರವೂರಿಗೆ ಸಂಚರಿಸುವ ಸಾಧ‍್ಯತೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಅವಕಾಶ ಕೊಡಿ. ಗುರುಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ.

ಸಿಂಹ: ಕಾರ್ಯರಂಗದಲ್ಲಿ ಅನ್ಯರಿಂದ ಉಂಟಾಗುವ ತೊಡಕುಗಳನ್ನು ನಾಜೂಕಾಗಿ ನಿಭಾಯಿಸಬೇಕಾಗುತ್ತದೆ. ಸ್ವಯಂ ವೃತ್ತಿಯವರಿಗೆ ಅನುಕೂಲಕರ ವಾತಾವರಣವಿರಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಕನ್ಯಾ: ಬೇರೆಯವರ ವಿಚಾರಗಳು ನಿಮ್ಮ ಮೇಲೆ ಪ್ರಭಾವ ಬೀರಬಹುದು. ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕೆಲಸಗಳಿಂದ ಸಂತೋಷ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ದೇವತಾ ಪ್ರಾರ್ಥನೆ ಮರೆಯದಿರಿ.

ತುಲಾ: ನಿಮ್ಮಲ್ಲಿರುವ ಒಳ್ಳೆಯತನದ ದುರುಪಯೋಗವಾದೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಕ್ಕೀತು. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ.

ವೃಶ್ಚಿಕ: ಪರೋಪಕಾರದಿಂದ ನಿಮ್ಮ ಗೌರವ, ಸ್ಥಾನ ಮಾನ ಹೆಚ್ಚಾದೀತು. ದೂರದ ವ್ಯವಹಾರಗಳಿಂದ ಲಾಭವಾಗಲಿದೆ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ನಿಮ್ಮ ಹಿಂದೆ ನಡೆಯುತ್ತಿದ್ದ ವಂಚನೆ ಬಯಲಿಗೆ ಬರಲಿದೆ.

ಧನು: ನಿಮ್ಮ ಕೆಲವೊಂದು ಮಾತಿನಿಂದ ಇನ್ನೊಬ್ಬರು ನೋವು ಅನುಭವಿಸುವಂತಾದೀತು. ಮಾತಿನ ಮೇಲೆ ನಿಗಾ ಇರಲಿ. ದಾಂಪತ್ಯದಲ್ಲಿ ಕಲಹಕ್ಕೆ ಅವಕಾಶ ಕೊಡಬೇಡಿ. ಮಹಿಳೆಯರಿಗೆ ಗೃಹಕೃತ್ಯಗಳ ಒತ್ತಡ ಕಂಡುಬಂದೀತು.

ಮಕರ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಗುರು ಹಿರಿಯರಿಂದ ಸಂತೋಷ ವೃದ್ಧಿಯಾಗಲಿದೆ. ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಉನ್ನತಿಯ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಕುಂಭ: ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬರಲಿದೆ. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಗುವುದು. ವೈದ್ಯಕೀಯ ವೃತ್ತಿಯವರಿಗೆ ಉನ್ನತಿಯ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ನಾಲಿಗೆ ಚಪಲದಿಂದಾಗಿ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ. ಹಿರಿಯರ ನಿಲುವಿನಲ್ಲಿ ದ್ವಂದ್ವ ಕಾಣಿಸೀತು. ಮಕ್ಕಳ ಭವಿಷ್ಯದ ನಿಮಿತ್ತ ಧನವ್ಯಯವಾಗಲಿದೆ.  ಉದ್ಯೋಗ ಬದಲಾವಣೆಗೆ ಪ್ರಯತ್ನ ಮುಂದುವರಿಸಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ