ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಲಾಭ ಕಂಡುಬರಲಿದೆ. ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುವರೋ ಎಂಬ ಕೀಳರಿಮೆ ಬೇಡ. ಸಹಾಯ ಹಸ್ತ ಚಾಚಿದವರಿಗೆ ನೆರವಾಗಲಿದ್ದೀರಿ. ಕಿರು ಓಡಾಟ ನಡೆಸಬೇಕಾಗುತ್ತದೆ.
ವೃಷಭ: ನಿಮ್ಮ ಅಗತ್ಯ ವಸ್ತುಗಳ ಖರೀದಿ, ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚವಾಗಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನವಾಗಿರಲಿದೆ. ಸಂಗಾತಿಯ ಸಹಕಾರ ಸಿಗುವುದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಮಿಥುನ: ನಿರೀಕ್ಷಿಸಿದಷ್ಟು ಧನಾದಾಯ ಗಳಿಕೆಯಾಗಿದ್ದರೂ ನೆಮ್ಮದಿ ಸಿಗದು. ಕೌಟುಂಬಿಕ ಭಿನ್ನಾಬಿಪ್ರಾಯಗಳನ್ನು ನಿವಾರಿಸಲು ಪ್ರಯತ್ನ ನಡೆಸಲಿದ್ದೀರಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ.
ಕರ್ಕಟಕ: ಅತೀವ ಚಟುವಟಿಕೆಯಿಂದ ಕೂಡಿದ ದಿನವಾಗಿರಲಿದೆ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೊಸ ಜನರ ಸ್ನೇಹ ಸಂಪಾದಿಸಲಿದ್ದೀರಿ. ತಾಳ್ಮೆಯಿರಲಿ.
ಸಿಂಹ: ಹಣಕಾಸಿನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಯೋಗ್ಯ ವಯಸ್ಕರಿಗೆ ವೈವಾಹಿ ಪ್ರಯತ್ನಕ್ಕೆ ಕೆಲವು ದಿನ ಕಾಯುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆಗೆ ತಕ್ಕ ಗೌರವ ಸಿಗಲಿದೆ.
ಕನ್ಯಾ: ಉದ್ಯೋಗ, ವ್ಯವಹಾರಗಳಲ್ಲಿ ನಿಮ್ಮ ಕಾರ್ಯವೈಖರಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದೆ. ಕುಟುಂಬ ವರ್ಗದವರಿಂದ ಪ್ರೋತ್ಸಾಹ ಕಂಡುಬರಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.
ತುಲಾ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಿದ್ದೀರಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ಸಂಶೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಮುನ್ನಡೆಯ ಯೋಗ. ನೀವು ನಂಬಿಕೊಂಡಿದ್ದವರಿಂದಲೇ ವಂಚನೆಗೊಳಗಾಗುವ ಭೀತಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ತಾಳ್ಮೆ ಅಗತ್ಯ.
ಧನು: ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಕೈ ಹಾಕಲು ಹೋದರೂ ಖರ್ಚು ವೆಚ್ಚಗಳು ಅಧಿಕವಾದೀತು. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ತಕ್ಕ ಫಲ ಸಿಗುವುದು.
ಮಕರ: ಸರಕಾರೀ ನೌಕರರಿಗೆ ಬಹುದಿನಗಳ ಕನಸು ನನಸಾಗುವುದು. ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇವತಾ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕುಂಭ: ನಿಮ್ಮ ಕೆಲಸ ಕಾರ್ಯಗಳಿಗೆ ಪರರನ್ನು ಅವಲಂಬಿಸುವ ಪರಿಸ್ಥಿತಿ ಬಂದೀತು. ಮಕ್ಕಳ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಹಣಕಾಸಿನ ಖರ್ಚು ವೆಚ್ಚಗಳು ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆ. ಕೌಟುಂಬಿಕವಾಗಿ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಯಂತ್ರೋಪಕರಣಗಳಿಂದ ಅಪಾಯವಾಗುವ ಸಾಧ‍್ಯತೆ. ಎಚ್ಚರಿಕೆ ಅಗತ್ಯ.