ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 23 ಮಾರ್ಚ್ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ಕಂಡುಬರಲಿದೆ. ದೇಹಾರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ವೈಯಕ್ತಿಕ ಜೀವನ ಸರಿಪಡಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ವೃಷಭ: ಹಿಂದೆ ಮಾಡಿದ ತಪ್ಪಿನ ಪಾಪ ಪ್ರಜ್ಞೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಮನಸ್ಸಿನಲ್ಲಿ ಎಷ್ಟೇ ಒತ್ತಡವಿದ್ದರೂ ಆತ್ಮೀಯರ ಸಾಂತ್ವನದ ಮಾತುಗಳು ಹಿತ ನೀಡಲಿವೆ. ಗೃಹಿಣಿಯರಿಗೆ ಗೃಹಕತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ವ್ಯಾಪಾರೀ ವರ್ಗದವರಿಗೆ ಮುನ್ನಡೆಯ ಯೋಗ.

ಕರ್ಕಟಕ: ನಿರೀಕ್ಷಿತ ಧನಾಗಮನವಾಗುವುದರಿಂದ ಉದ್ದೇಶಿತ ಕೆಲಸಗಳು ಅಡೆತಡೆಯಿಲ್ಲದೇ ನಡೆಯಲಿದೆ. ಹಣಕಾಸಿನ ವಿಚಾರದಲ್ಲಿ ಅನ್ಯರ ಸಲಹೆ ಪಡೆಯಬೇಕಾಗುತ್ತದೆ. ಹಿರಿಯರಿಂದ ನಿಮ್ಮ ಸಂತೋಷ ವೃದ್ಧಿಯಾಗಲಿದೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಪ್ರಗತಿಯಿದ್ದರೂ ನಿರೀಕ್ಷಿತ ಧನಾಗಮನವಾಗದೇ ಬೇಸರವಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕುಟುಂಬದವರೊಂದಿಗೆ ಚರ್ಚಿಸಿ.

ಕನ್ಯಾ: ಹೊಸದಾಗಿ ಆರಂಭಿಸಿದ್ದ ಕೆಲಸಗಳಿಗೆ ಅಡೆತಡೆ ಬಂದೀತು. ಕುಲದೇವರ ಪ್ರಾರ್ಥನೆಯೊಂದಿಗೆ ಇಂದಿನ ದಿನದಾರಂಭ ಮಾಡಿದರೆ ಉತ್ತಮ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ತುಲಾ: ಉದ್ಯೋಗ, ವ್ಯವಹಾರಗಳಿಗೆ ಗೌರವ ತಾಳ್ಮೆ ಕಾಪಾಡುವುದು ಮುಖ್ಯ. ಬೇರೆಯವರು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ಯಾವುದೇ ವಿಚಾರದ ಬಗ್ಗೆ ಆತುರದ ತೀರ್ಮಾನ ಬೇಡ.

ವೃಶ್ಚಿಕ: ನಿಮ್ಮ ಆತ್ಮೀಯರು ಕೊಟ್ಟ ಪ್ರಿಯವಾದ ವಸ್ತು ಕಳೆದುಕೊಳ್ಳುವ ದೌರ್ಭಾಗ್ಯ ನಿಮ್ಮದಾಗಲಿದೆ. ಮನಸ್ಸಿನ ದುಃಖವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಲಿದ್ದೀರಿ. ಯಂತ್ರೋಪಕರಣಗಳ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಧನು: ಕೆಲವೊಂದು ಖರ್ಚು ವೆಚ್ಚಗಳು ಅನಗತ್ಯ ಎನಿಸಿದರೂ ಕೈ ಜಾರಿ ಕೆಲವೊಂದು ವಿಚಾರಗಳು ನಡೆಯಲಿವೆ. ಆತ್ಮೀಯರ ಕಷ್ಟಗಳಿಗೆ ಸಾಥ್ ನೀಡುವಿರಿ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಭೇಟಿ ಸಾಧ್ಯತೆ. ತಾಳ್ಮೆಯಿರಲಿ.

ಮಕರ: ಎಲ್ಲೋ ಹೋಗಬೇಕೆಂದು ಮಾಡಿದ್ದ ಯೋಜನೆ ಕೊನೆ ಕ್ಷಣದಲ್ಲಿ ರದ್ದಾಗಲಿದೆ. ಅನಿವಾರ್ಯವಾಗಿ ನಿಮ್ಮ ಕೆಲಸಗಳಿಗೆ ಬೇರೊಬ್ಬರನ್ನು ಆಶ್ರಯಿಸಬೇಕಾದೀತು. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ.

ಕುಂಭ: ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬಂದೀತು. ಕುಟುಂಬ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಂಗಾತಿಯೊಂದಿಗೆ ಚರ್ಚಿಸಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮೀನ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಬಾಯ್ತಪ್ಪಿ ಆಡುವ ಮಾತಿನಿಂದ ಆಪ್ತರಿಗೆ ನೋವಾದೀತು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ದೇವತಾ ಪ್ರಾರ್ಥನೆ ಮಾಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ