ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 31 ಮಾರ್ಚ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಎಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅಡ್ಡಿಯುಂಟಾದೀತು. ಮಾನಸಿಕವಾಗಿ ಕಾಡುತ್ತಿರುವ ಸಮಸ್ಯೆಗಳಿಗೆ ಆಪ್ತರಿಂದ ಸಮಾಲೋಚನೆ ನಡೆಸಲಿದ್ದೀರಿ. ಸಾಂಸಾರಿಕವಾಗಿ ತಾಳ್ಮೆ ಅಗತ್ಯ. ಮಾತಿನ ಮೇಲೆ ನಿಗಾ ಇರಲಿ.

ವೃಷಭ: ನಿಮ್ಮ ವ್ಯವಹಾರಗಳಲ್ಲಿ ಬೇರೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ವೈಯಕ್ತಿಕ ಸಮಸ್ಯೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಲು ಕಷ್ಟವಾದೀತು. ಸಂಗಾತಿಯ ಸಹಕಾರ ಸಿಗುವುದು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಮಿಥುನ: ಉದ್ಯೋಗ, ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸಕಾಲದಲ್ಲಿ ಹಣಕಾಸಿನ ಸಹಾಯ ಸಿಗುವುದರಿಂದ ಕೆಲಸ ಕಾರ್ಯಗಳು ಸುಗಮವಾಗುವುದು. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ.

ಕರ್ಕಟಕ: ಗೃಹೋಪಯೋಗಿ ವಸ್ತುಗಳ ಖರೀದಿ, ವಾಹನ ರಿಪೇರಿ ಇತ್ಯಾದಿ ಕೆಲಸಗಳಿಗೆ ಖರ್ಚು ವೆಚ್ಚಗಳು ಕಂಡುಬಂದೀತು. ಹಿರಿಯರಿಗೆ ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅಧ್ಯಯನಪ್ರವೃತ್ತರಿಗೆ ಶ್ರಮ ಹೆಚ್ಚಾಗುವುದು. ವಿದೇಶೀ ಮೂಲಗಳಿಂದ ಧನಾಗಮನವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಮಾನಾದಿಗಳು ಹೆಚ್ಚಾಗಲಿದೆ.

ಕನ್ಯಾ: ಅಧ್ಯಯನ ಪ್ರವೃತ್ತರಿಗೆ ನಾನಾ ರೀತಿಯ ಅವಕಾಶಗಳು ಕಂಡುಬರಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಮಕ್ಕಳಿಂದ ಸಂತೋಷ ಸಿಗುವುದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ತುಲಾ: ವಿದ್ಯಾರ್ತಿಗಳಿಗೆ ವಿದ್ಯಾರ್ಜನೆಯಲ್ಲಿ ತಲ್ಲೀನತೆ ಕಂಡುಬರಲಿದೆ. ನಿಮ್ಮ ವಾಕ್ಚತುರತೆಯಿಂದ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ತಾಳ್ಮೆಯಿರಲಿ.

ವೃಶ್ಚಿಕ: ಅಂದುಕೊಂಡ ಫಲಿತಾಂಶ ಪಡೆಯಬೇಕಾದರೆ ಹೆಚ್ಚಿನ ಪರಿಶ್ರಮ ಅಗತ್ಯ. ಗೃಹೋಪಕರಣ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸದ್ಯಕ್ಕೆ ಬೇಡ. ದೇವತಾ ಪ್ರಾರ್ಥನೆ ಮಾಡಿ.

ಧನು: ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಇಷ್ಟ ದೇವತಾ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಅವಿವಾಹಿತರಿಗೆ ಯೋಗ್ಯ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.

ಮಕರ: ಸುದೀರ್ಘ ಪ್ರಯಾಣದಿಂದ ದೇಹಾಯಾಸವಾಗುವ ಸಂಭವ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರ ಸಲಹೆ ಪಡೆಯಲಿದ್ದೀರಿ. ಮಕ್ಕಳಿಗೆ ಅಚ್ಚರಿಯ ಉಡುಗೊರೆ ಮೂಲಕ ಸಂತೋಷ ನೀಡಲಿದ್ದೀರಿ.

ಕುಂಭ: ಮಾನಸಿಕವಾಗಿ ಕಾಡುತ್ತಿರುವ ಯೋಚನೆಗಳಿಗೆ ಆಪ್ತರಿಂದ ಪರಿಹಾರ ಸಿಗುವುದು. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ಗೌರವ ವೃದ್ಧಿಯಾಗಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಕ್ರಿಯಾತ್ಮಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಚಿಂತೆ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ