ಮೇಷ: ಪಾಲುದಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಲಾಭ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರುವುದು. ಬಹಳ ದಿನಗಳ ನಂತರ ಆಪ್ತರ ಭೇಟಿಯಾದ ಸಂತೋಷ ನಿಮ್ಮದಾಗಲಿದ.ೆ
ವೃಷಭ: ಆರೋಗ್ಯದಲ್ಲಿ ಸಣ್ಣ ಪುಟ್ಟ ಕಿರಿ ಕಿರಿಯಿದ್ದರೂ ಮಾನಸಿಕವಾಗಿ ನೀವು ಮಾಡುವ ಕೆಲಸಗಳು ನಿಮಗೆ ತೃಪ್ತಿ ತಂದುಕೊಡಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಸರಕಾರಿ ಕೆಲಸಗಳಲ್ಲಿರುವವರಿಗೆ ಉದ್ಯೋಗದಲ್ಲಿ ಕಾರ್ಯದೊತ್ತಡ ಕಂಡುಬರಲಿದೆ. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರಲಿದೆ.
ಕರ್ಕಟಕ: ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದರೆ ತಕ್ಕ ಫಲ ಕಂಡುಬರಲಿದೆ. ದೇವತಾ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಸಿಂಹ: ಕಾರ್ಯದೊತ್ತಡ ಎಷ್ಟೇ ಇದ್ದರೂ ಕುಟುಂಬದವರಿಗಾಗಿ ಸಮಯ ಮೀಸಲಿಡಬೇಕಾಗುತ್ತದೆ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ತಾಳ್ಮೆಯಿರಲಿ.
ಕನ್ಯಾ: ನೀವು ಒಳ್ಳೆಯ ಕೆಲಸಕ್ಕೆ ಕೈ ಹಾಕಲು ಹೋದರೂ ಅದು ನಿಮಗೆ ತಿರುಗುಬಾಣವಾದೀತು. ಸಂಗಾತಿಯ ಸಮಯೋಚಿತ ಸಲಹೆ ಪಾಲಿಸುವುದು ಉತ್ತಮ. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ: ವ್ಯಾಪಾರೀ ವರ್ಗದವರಿಗೆ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಯಂತ್ರೋಪರಕಣಗಳ ಜೊತೆ ಕೆಲಸ ಮಾಡುವಾಗ ಅಪಘಾತವಾಗುವ ಅಪಾಯ. ಎಚ್ಚರಿಕೆಯಿಂದಿರಬೇಕು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ವೃಶ್ಚಿಕ: ಕಟ್ಟಡ ಕಾಮಗಾರಿ ಕೆಲಸಕ್ಕೆ ಕೈ ಹಾಕಿದ್ದರೆ ಅಡೆತಡೆಗಳು ಬಂದೀತು. ಕೆಳ ಹಂತದ ನೌಕರರಿಂದ ಕಿರಿ ಕಿರಿ ಎದುರಾದೀತು. ಮಾತಿನ ಮೇಲೆ ನಿಗಾ ಇರಲಿ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಲಿದ್ದೀರಿ.
ಧನು: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರುವುದು. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ದೇವತಾ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಅನಗತ್ಯ ಚಿಂತೆ ಬೇಡ.
ಮಕರ: ಸರಕಾರೀ ಉದ್ಯೋಗಿಗಳಿಗೆ ಮುಂಬಡ್ತಿ ಯೋಗ. ಮಹಿಳೆಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ. ಹಳೆಯ ಮಿತ್ರರನ್ನು ಭೇಟಿಯಾಗಲಿದ್ದೀರಿ. ತಾಂತ್ರಿಕ ವೃತ್ತಿಯವರಿಗೆ ಕಾರ್ಯದೊತ್ತಡ ಕಂಡುಬರಲಿದೆ.
ಕುಂಭ: ಕಾರ್ಯರಂಗದಲ್ಲಿ ನಿಮ್ಮ ಅಧಿಕ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಸಾಂಸಾರಿಕವಾಗಿ ತೃಪ್ತಿಯಿರಲಿದೆ. ತಾಳ್ಮೆಯಿರಲಿ.
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲು ತಾಳ್ಮೆಯಿರಬೇಕು. ಮಕ್ಕಳ ವಿಚಾರದಲ್ಲಿ ಸಂಗಾತಿಯೊಂದಿಗೆ ವಾದ ವಿವಾದವಾದೀತು. ಮಾತಿನ ಮೇಲೆ ನಿಗಾ ಇರಲಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.